ಸಮುದ್ರಪಾಲಾದ ಯುವಕ !

Kannada News

18-09-2017

ಮಂಗಳೂರು: ಮಂಗಳೂರಿನ ಪಣಂಬೂರು, ಸಮುದ್ರ ತೀರದ ಬಳಿ ಯುವಕನೊರ್ವ ನೀರುಪಾಲಾಗಿರುವ ದಾರುಣ ಘಟನೆ ನಡೆದಿದೆ. ಮಂಗಳೂರಿನ ಪಣಂಬೂರು ಸಮುದ್ರ ತೀರದ ಬಳಿ ಇರುವ, ಚಿತ್ರಪುರ ಬಳಿ ಈ ದುರ್ಘಟನೆ ಸಂಭವಿಸಿದೆ. ಆಂಧ್ರ ಪ್ರದೇಶದ ಸಾಯಿಚರಣ್ (19) ಮೃತ ಯುವಕ. ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ಸಾಯಿಚರಣ್, ತನ್ನ ನಾಲ್ಕು ಮಂದಿ ಗೆಳೆಯರೊಂದಿಗೆ ರಜೆ ಪ್ರವಾಸ ಬಂದಿದ್ದ ವೇಳೆ ಈ ದುರ್ಘಟನೆ ನೆಡೆದಿದೆ. ಮಡಿಕೇರಿ, ಮಂಗಳೂರು ಪ್ರವಾಸ ಬಂದಿದ್ದ ವಿದ್ಯಾರ್ಥಿಗಳು, ಸಮುದ್ರದಲ್ಲಿ ಆಟ ಆಡುವ ವೇಳೆ ಸಾಯಿಚರಣ್ ನೀರಿನಲ್ಲಿ ಮುಳುಗಿ, ನಾಪತ್ತೆಯಾಗಿದ್ದಾನೆ. ಇನ್ನು ವಿಷಯ ತಿಳಿದ ಪಣಂಬೂರು ಪೊಲೀಸರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಯುವಕನ ಶವ ಪತ್ತೆಗೆ ಸಮುದ್ರದ ಅಲೆಗಳ ರಭಸ ಕಾರ್ಯಾಚರಣೆ ಅಡ್ಡಿ ಉಂಟುಮಾಡುತ್ತಿವೆ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 


ಸಂಬಂಧಿತ ಟ್ಯಾಗ್ಗಳು

ಮಂಗಳೂರು ಸಮುದ್ರಪಾಲಾದ ಯುವಕ ! ಯುವಕ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ