ಕಬಿನಿ ಜಲಾಶಯ ಇನ್ನೇನು ಭರ್ತಿ !

Kannada News

18-09-2017

ಮೈಸೂರು: ಮೈಸೂರಿನ ಕಬನಿ ಜಲಾಶಯ ಸಂಪೂರ್ಣ ಭರ್ತಿಯತ್ತ ಸಾಗಿದೆ. ಕಬಿನಿ ಜಲಾನಯನ ಪ್ರದೇಶ ಹಾಗೂ ಕೇರಳದ ವೈನಾಡು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ, ಜಲಾಶಯದ ಸಂಪೂರ್ಣ ಭರ್ತಿಗೆ ಕೇವಲ 4 ಅಡಿಗಳು ಮಾತ್ರ ಬಾಕಿ ಇದೆ. 2280 ಅಡಿಗಳನ್ನು ತಲುಪಿದ ಕಬಿನಿ ಜಲಾಶಯದ ನೀರಿನ ಪ್ರಮಾಣ, ಸಮುದ್ರ ಮಟ್ಟದಿಂದ 2284 ಅಡಿಗಳಷ್ಟು ಗರಿಷ್ಠ ಸಾಮರ್ಥ್ಯವನ್ನು ಹೊಂದಿದೆ. ಯಾವುದೇ ಕ್ಷಣದಲ್ಲಾದರೂ ಕಬಿನಿ ಜಲಾಶಯದಿಂದ ನದಿಗೆ ಹೆಚ್ಚು ನೀರು ಬಿಡುಗಡೆ ಮಾಡುವ ಸಾಧ್ಯತೆ ಇದ್ದು,  ಕಪಿಲ ನದಿ ಪಾತ್ರದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ಕಪಿಲ ನದಿ ಪಾತ್ರದ ಇಕ್ಕೆಲಗಳ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ. ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣದಲ್ಲು, ಭಾರೀ ಹೆಚ್ಚಳವಾಗಿದೆ. 10,000 ಕ್ಯೂಸೆಕ್ ದಾಟಿದ ಕಬಿನಿ ಜಲಾಶಯದ ಒಳಹರಿವು, ಜಲಾಶಯದಿಂದ 2000 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಅಲ್ಲದೆ ಜಲಾಶಯದ ಒಳಹರಿವು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದ್ದು, ಪರಿಣಾಮ ಜಲಾಶಯದ ಒಳಹರಿವಿಗೆ ಅನುಗುಣವಾಗಿ ಹೊರಹರಿವಿನ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆ ಇದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ