ನಮ್ಮ ಮೆಟ್ರೋದ ರೈಲು ಸುರಂಗ ಮಾರ್ಗದಲ್ಲಿ ಮೊಬೈಲ್ ನೆಟ್‍ವರ್ಕ್ ಜೊತೆಗೆ ಉಚಿತ ವೈಫೈ ಸೌಲಭ್ಯ

Kannada News

23-03-2017 695

ಬೆಂಗಳೂರು,ಮಾ.23- ನಮ್ಮ ಮೆಟ್ರೋದ ರೈಲು ಸುರಂಗ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಸುವವರಿಗೆ ಕೇವಲ 15 ದಿನಗಳಲ್ಲಿ ಮೊಬೈಲ್ ನೆಟ್‍ವರ್ಕ್ ಜೊತೆಗೆ ಉಚಿತ ವೈಫೈ ಸೌಲಭ್ಯ ದೊರೆಯಲಿದೆ.
ಇದರಿಂದಾಗಿ ಸುರಂಗ ಮಾರ್ಗದಲ್ಲಿ ಸಂಚರಿಸುವಾಗ ಪ್ರಯಾಣಿಸುವಾಗ ಮೊಬೈಲ್ ನೆಟ್‍ವರ್ಕ್ ಸಮಸ್ಯೆಗೆ ಪರಿಹಾರ ದೊರೆಕಿದಂತಾಗಿದೆ
ಮೆಟ್ರೋ ರೈಲಿನಲ್ಲಿ ಮೊಬೈಲ್ ರಿಂಗಣಿಸೋದಿಲ್ಲ ಎಂದು ಸುರಂಗ ಮಾರ್ಗದಲ್ಲಿ ಹೋಗುತ್ತಿದ್ದಾಗ ಪರಿತಪಿಸುತ್ತಿದ್ದ ಸಾರ್ವಜನಿಕರ ಸಮಸ್ಯೆಗೆ ಬಿಎಂಆರ್‍ಸಿಎಲ್ ಪರಿಹಾರ ಕಂಡು ಹಿಡಿದಿದ್ದು ಇನ್ನೇನು ಕೆಲ ದಿನದಲ್ಲಿ ಮೆಟ್ರೋ ಸುರಂಗದಲ್ಲಿ ಮೊಬೈಲ್ ರಿಂಗಣಿಸಲಿದೆ.
ಬಿಎಂಆರ್‍ಸಿಎಲ್ ಸುರಂಗದಲ್ಲಿ ಸಿಗ್ನಲ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಅಮೆರಿಕನ್ ಟವರ್ ಕಾಪೆರ್Çೀರೇಷನ್ ಜೊತೆ ಒಪ್ಪಂದ ಮಾಡಿಕೊಂಡಿದೆ.ಎಟಿಸಿ ಈಗಾಗಲೇ ಸುರಂಗದಲ್ಲಿ ಸಿಗ್ನಲ್ ಕೇಬಲ್ ಅಳವಡಿಸುವ ಕಾರ್ಯ ಆರಂಭಿಸಿದ್ದು ಮುಂದಿನ 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ.
ಎಟಿಸಿ ಕಂಪನಿ ಸುರಂಗದಲ್ಲಿ ಲೇಕಿ ಕೇಬಲ್ ಅಳವಡಿಸುತ್ತಿದ್ದು ಈ ಲೇಕಿ ಕೇಬಲ್ ಅಲ್ಲಲ್ಲಿ ತೆರೆದಿರುತ್ತದೆ.ಇದರ ಮೂಲಕ ಸಿಗ್ನಲ್ ಸೋರಿಕೆಯಾಗಿ ಮೊಬೈಲ್ ಬಳಕೆಗೆ ಲಭ್ಯವಾಗಲಿದೆ. ಅಲ್ಲದೇ ಇದು ಅಂಟೆನಾ ರೀತಿಯಲ್ಲಿ ಕಾರ್ಯನಿವರ್ಹಿಸುತ್ತದೆ.ಹೀಗಾಗಿ ಮೊಬೈಲ್ ಸೇವೆ ಒದಗಿಸುವ ಕಂಪನಿಗಳು ಎಟಿಸಿ ಜೊತೆ ಒಪ್ಪಂದ ಮಾಡಿಕೊಂಡು ಮೂಲ ಸೌಕರ್ಯ ಒದಗಿಸಬಹುದಾಗಿದೆ.
ಇನ್ನು ಸುರಂಗದಲ್ಲಿ ವೈಫೈ ಒದಗಿಸುವ ಸಂಬಂಧ ಬಿಎಂಆರ್‍ಸಿಎಲ್ ಎಟಿಸಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ ಪೂರ್ವ ಪಶ್ಚಿಮ ಕಾರಿಡಾರ್‍ನಲ್ಲಿರುವ ಸರ್.ಎಂ. ವಿಶ್ವೇಶ್ವರಯ್ಯ ನಿಲ್ದಾಣ ಹಾಗೂ ಬಿ.ಅರ್.ಅಂಬೇಡ್ಕರ್ ನಿಲ್ದಾಣದಲ್ಲಿ ಈಗಾಗಲೇ ಜಿಯೋ ನೆಟ್‍ವರ್ಕ್ ಹಾಗೂ ಮತ್ತು ಇನ್ಯಾವುದೇ ಫೆÇರ್ ಜಿ ಕೂಡಾ ಲಭ್ಯವಾಗುತ್ತಿದೆ.
ಉತ್ತರ- ಮತ್ತು ದಕ್ಷಿಣ ಕಾರಿಡಾರ್‍ನ ಸಂಪಿಗೆ ರಸ್ತೆ-ನ್ಯಾಷನಲ್ ಕಾಲೇಜು ನಿಲ್ದಾಣದಲ್ಲಿ ರೈಲು ಸಂಚಾರ ಆರಂಭಕ್ಕೆ ಮುನ್ನವೇ ಸಿಗ್ನಲ್ ಸಿಗಲಿದೆ.
ಒಟ್ಟಾರೆ ನಗರದ ಮೆಟ್ರೋ ನಿಲ್ದಾಣ ಹಾಗೂ ಸುರಂಗದಲ್ಲಿ ಸಿಗ್ನಲ್ ಸಮಸ್ಯೆ ಬಗೆಹರಿಸಲು ಬಿಎಂಆರ್‍ಸಿಎಲ್ ಕಾರ್ಯತತ್ಪರವಾಗಿದ್ದು ಸದ್ಯದಲ್ಲೇ ಸಮಸ್ಯೆ ಪರಿಹಾರವಾಗಲಿದೆ.

Links :
ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ