ಕುಡಿದು ಆಂಬುಲೆನ್ಸ್ ಚಾಲನೆ: ಚಾಲಕ ಬಂಧನ

Kannada News

16-09-2017

ಬೆಂಗಳೂರು: ಪಾನಮತ್ತ ಚಾಲಕರ ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದ ಹಲಸೂರು ಗೇಟ್ ಸಂಚಾರ ಪೊಲೀಸರ, ಸರಾತ್ರಿ ಕುಡಿದು ಆಂಬುಲೆನ್ಸ್ ಚಲಾಯಿಸುತ್ತಿದ್ದ ಚಾಲಕನೊಬ್ಬ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಹಲಸೂರು ಗೇಟ್ ಪೊಲೀಸ್ ಠಾಣೆಯ ಹತ್ತಿರದ ರಸ್ತೆಯಲ್ಲಿ ನಿನ್ನೆ ರಾತ್ರಿ 11ರ ವೇಳೆ ಪಾನಮತ್ತ ಚಾಲಕರ ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರಿಗೆ ಕಂಠ ಪೂರ್ತಿ ಕುಡಿದು ಆಂಬುಲೆನ್ಸ್ ಚಲಾಯಿಸಿಕೊಂಡು ಬಂದ ಚಾಲಕ ದಿನೇಶ್ ಸಿಕ್ಕಿಬಿದ್ದಿದ್ದು ಆತನ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಆಲ್ಕೋ ಮೀಟರ್ ಪರೀಕ್ಷೆಯಲ್ಲಿ ದಿನೇಶ್ ಶೇಕಡ 150 ರಷ್ಟು ಕುಡಿದಿರುವುದು ಪತ್ತೆಯಾಗಿದೆ. ರೋಗಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ದಿನೇಶ್ ವಾಪಸಾಗುತ್ತಿದ್ದು ಆತನ ವಾಹನ ಚಾಲನಾ ಪರವಾನಗಿ ಪತ್ರವನ್ನು ವಶಪಡಿಸಿಕೊಂಡು ಆಂಬುಲೆನ್ಸ್ ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ