ಬಸ್ ಹರಿದು ಪಾದಾಚಾರಿ ಸಾವು !

Kannada News

16-09-2017

ಬೆಂಗಳೂರು: ಕೆಂಗೇರಿಯ ಮೈಸೂರು ರಸ್ತೆಯ ಮೈಲಸಂದ್ರದ ಬಳಿ ನಿನ್ನೆ ರಾತ್ರಿ ವೇಗವಾಗಿ ಬಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‍ಆರ್‍ಟಿಸಿ) ಬಸ್ ಹರಿದು ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೈಲಸಂದ್ರದ ದುಬಾಸಿಪಾಳ್ಯದ ನಿನ್ನೆ ರಾತ್ರಿ 7.30ರ ವೇಳೆ ರಸ್ತೆ ದಾಟುತ್ತಿದ್ದ ಸುಮಾರು 35 ವರ್ಷದ ವ್ಯಕ್ತಿ ವೇಗವಾಗಿ ಬಂದ ಬಸ್ ಹರಿದು ಮೃತಪಟ್ಟಿದ್ದಾರೆ. ಸದ್ಯಕ್ಕೆ ಅವರ ಹೆಸರು ವಿಳಾಸ ಪತ್ತೆಯಾಗಿಲ್ಲ.

ಅಪಘಾತದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಕೆಂಗೇರಿ ಸಂಚಾರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದಾಗ ಯಾವ ವಾಹನ ಅಪಘಾತ ಮಾಡಿರುವುದು ಪತ್ತೆಯಾಗಿರಲಿಲ್ಲ, ಮುಂದಿನ ತನಿಖೆ ಪೊಲೀಸರು ಕೈಗೊಂಡ ಬೆನ್ನಲ್ಲೇ ಬಸ್‍ ನಲ್ಲಿದ್ದ ಪ್ರಯಾಣಿಕ ರಮೇಶ್ ಎನ್ನುವರು ನಮ್ಮ 100ಕ್ಕೆ ಕರೆ ಮಾಡಿ ಅಪಘಾತ ವಿಷಯ ತಿಳಿಸಿದ್ದು ಕೂಡಲೇ ಬಸ್ ಚಾಲಕನನ್ನು ಬಂಧಿಸಿದ್ದಾರೆ.

ಪಾದಚಾರಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ಕಳುಹಿಸಿ ಮೃತರ ಗುರುತು ಪತ್ತೆ ಕಾರ್ಯ ಕೈಗೊಂಡಿದ್ದಾರೆ ಎಂದು ಡಿಸಿಪಿ ಶಿವಶಂಕರ್ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ