ಟಿವಿ ಗುರೂಜಿ ಮನೆಮೇಲೆ ಮಾಂಸ !

Kannada News

16-09-2017

ಬೆಂಗಳೂರು: ಆನಂದ್ ಗುರೂಜಿ ಅವರ ಬನಶಂಕರಿ ಮೂರನೇ ಹಂತದ ಕಾಮಾಕ್ಯ ಬಡವಾಣೆಯ ಮನೆ ಮೇಲೆ ಕಳೆದ ರಾತ್ರಿ ಕಿಡಿಗೇಡಿಗಳು, ಮಾಂಸದ ತುಂಡುಗಳು ಮತ್ತು ಬಿಯರ್ ಬಾಟಲಿಗಳನ್ನು ಎಸೆದು ಪರಾರಿಯಾಗಿದ್ದಾರೆ.

ಕಾಮಾಕ್ಯ ಬಡವಾಣೆಯ ಆನಂದ್ ಗುರೂಜಿ ಮನೆಯ ಬಳಿ ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮನೆಯ ಮೇಲೆ ಮತ್ತು ಬಾಗಲಿಗೆ ಬಿಯರ್ ಬಾಟಲಿ ಒಡೆದು ಮಾಂಸ ಎಸೆದು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳ ಈ ಕೃತ್ಯ ಆನಂದ್ ಗುರೂಜಿ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗೋವಿನ ಬಗ್ಗೆ ಆನಂದ್ ಗುರೂಜಿಯ ವಿಶೇಷ ಕಾರ್ಯಕ್ರಮ ನಾಳೆ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ಹಿನ್ನಲೆಯಲ್ಲಿ ದುಷ್ಕರ್ಮಿಗಳು ಈ ಕೃತ್ಯವೆಸಗಿರಬಹುದು ಎಂದು ಆನಂದ್ ಗುರೂಜಿ ಶಂಕೆ ವ್ಯಕ್ತಪಡಿಸಿದ್ದಾರೆ. ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಪ್ರಕರಣ ದಾಖಲಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಕಿಡಿಗೇಡಿಗಳ ಪತ್ತೆಗಾಗಿ ಶೋಧ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ