ಸಾಂಬಾರ್ ವಿಷಯಕ್ಕೆ ಸಾವು !

Kannada News

16-09-2017

ಬೆಂಗಳೂರು: ಕೆಪಿ ಅಗ್ರಹಾರದ ಚೋಳೂರುಪಾಳ್ಯದಲ್ಲಿ ನಿನ್ನೆ ರಾತ್ರಿ ಸಾಂಬಾರು ಚೆನ್ನಾಗಿಲ್ಲ ಅಂತಾ ಗಂಡ ಬೈದಿದ್ದಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.

ಚೋಳೂರುಪಾಳ್ಯದ ನಾಗರತ್ನಮ್ಮ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾರೆ. ರಾತ್ರಿ ನಾಗರತ್ನಮ್ಮ ತನ್ನ ಪತಿ ಶ್ರೀನಿವಾಸ್‍ ಗೆ ಊಟ ಉಣಬಡಿಸುತ್ತಿದ್ದರು. ಈ ವೇಳೆ ಸಾಂಬಾರು ಚೆನ್ನಾಗಿ ಮಾಡಿಲ್ಲ ಎಂದು ಶ್ರೀನಿವಾಸ್ ಬೈದಿದ್ದರು. ಇದರಿಂದ ಮನನೊಂದ ನಾಗರತ್ನಮ್ಮ ಮನೆಯ ರೂಮ್‍ ನಲ್ಲಿ ನೇಣಿಗೆ ಶರಣಾಗಿದ್ದಾರೆ.

ನಾಗರತ್ನಮ್ಮ- ಶ್ರೀನಿವಾಸ್‍ಗೆ ಮದುವೆಯಾಗಿ 28 ವರ್ಷವಾಗಿದೆ. ಶ್ರೀನಿವಾಸ್‍ ಗೆ ಪಾರ್ಶ್ವವಾಯುವಾಗಿದೆ. ನಿನ್ನೆ ರಾತ್ರಿ ಮಗ ಮಿಥುನ್ ರೂಮ್‍ ಗೆ ಹೋಗಿ ನೋಡಿದಾಗ ತಾಯಿ ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ