ಗೌರಿ ಹತ್ಯೆ: ಸನಾತನ ಸಂಸ್ಥಾ ಕೈವಾಡ ಶಂಕೆ..?

Kannada News

16-09-2017

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹಂತಕರ ಹಿಂದೆ ಮಹಾರಾಷ್ಟ್ರದ ಕಟ್ಟಾ ಹಿಂದೂ ಸಂಘಟನೆ ಸನಾತನ ಸಂಸ್ಥಾ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಸತಾನನ ಸಂಸ್ಥಾ ಕೈವಾಡದ ಶಂಕೆಯ ಹಿನ್ನಲೆಯಲ್ಲಿ ವಿಶೇಷ ತನಿಖಾ ತಂಡ(ಎಸ್‍ಐಟಿ) ಅಧಿಕಾರಿಗಳು ಮಹಾರಾಷ್ಟ್ರ ಹಾಗೂ ಗೋವಾಕ್ಕೆ ತೆರಳಿ ಶೋಧ ಹಂತಕರಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

ಸಂಶೋಧಕ ಕಲುಬುರಗಿ ಮತ್ತು ಗೌರಿ ಹತ್ಯೆಯನ್ನು ಒಂದೇ ಮಾದರಿಯ ಪಿಸ್ತೂಲಿನಿಂದ ಗುಂಡಿಕ್ಕಿ ಕೊಲೆ ಮಾಡಲಾಗಿದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ನೀಡಿದ್ದು ಅದನ್ನು ಆಧರಿಸಿ ಅಧಿಕಾರಿಗಳು  ಸನಾತನ ಸಂಸ್ಥೆ ಮೇಲೆ ಕಣ್ಣಿಟ್ಟು ತನಿಖೆ ಕೈಗೊಂಡಿದ್ದಾರೆ ಎಂದು ಎಸ್‍ಐಟಿ ಮೂಲಗಳು ತಿಳಿಸಿವೆ.

ಪ್ರಮುಖವಾಗಿ ಸನಾತನ ಸಂಸ್ಥಾದ ಪ್ರಮುಖ ಸದಸ್ಯ ರುದ್ರಾ ಪಾಟೀಲ್ ಎಂಬಾತನೇ ಗೌರಿ ಹತ್ಯೆ ಮಾಸ್ಟರ್ ಮೈಂಡ್ ಎನ್ನುವ ಅನುಮಾನ ಅಧಿಕಾರಿಗಳಲ್ಲಿ ಮೂಡಿದ್ದು, ಈ ಹಿನ್ನಲೆಯಲ್ಲಿ ಹಂತಕನ ಶೋಧ ನಡೆಸಲಾಗಿದೆ

ಸನಾತನ ಸಂಸ್ಥಾ ಹಿಂದೂ ಧರ್ಮವನ್ನು ಉಳಿಸೋದು ಬೆಳೆಸುವ ಗುರಿ ಹೊಂದಿದೆ ಹಿಂದೂ ಧರ್ಮಕ್ಕೆನಾದರೂ ತೊಂದರೆ ಧಕ್ಕೆ ಮಾಡಿದವರಿಗೆ ತಕ್ಕ ಶಿಕ್ಷೆ, ಅನ್ನುವುದು  ಸಂಸ್ಥಾದ ವಾದವಾಗಿದೆ. ಭಾರತೀಯ ಸಂವಿಧಾನದಲ್ಲಿ ಕೃತ್ಯಕ್ಕೆ ತಕ್ಕಂತೆ ಶಿಕ್ಷೆ ಇರುವ ಹಾಗೆ ಸನಾತನ ಸಂಸ್ಥಾದಲ್ಲೂ ವಿಶೇಷ ಸಂವಿಧಾನ ಮತ್ತು ಕಾನೂನು ಇದೆ.

ಸರಿ ಸುಮಾರು 21 ಪ್ರತ್ಯೇಕ ಪುಸ್ತಕಗಳು ಇದ್ದು, ಒಂದೊಂದು ಪುಸ್ತಕವೂ ಸರಿಸುಮಾರು ನೂರು ಪುಟಗಳಿವೆ.ಪ್ರಕರ ಹಿಂದೂತ್ವದ ಪ್ರತಿಪಾದನೆ ಮಾಡುತ್ತಿರುವ ಸಂಸ್ಥಾ ಪನ್ಸಾರೆ ಹಾಗೂ ದಾಬೋಲ್ಕರ್ ಹತ್ಯೆ ಹಿಂದಿದೆ ಎನ್ನುವ ಶಂಕೆ ವ್ಯಕ್ತವಾಗಿ ತನಿಖೆ ಕೂಡ ನಡೆಸಲಾಗಿತ್ತು.

ಗೌರಿ ಲಂಕೇಶ್ ಹತ್ಯೆಗೆ ಸಂಸ್ಥಾದ ಪ್ರಮುಖ ರುದ್ರಾ ಪಾಟೀಲನೇ ಉಸ್ತುವಾರಿ ಹೊತ್ತಿದ್ದ ಅನ್ನೋ ಸಂಶಯವೂ ಎದುರಾಗಿದೆ. ಇಷ್ಟೆಲ್ಲಾ ಮಾಹಿತಿಯನ್ನು ಆಧರಿಸಿ ಬೇರೆ ಬೇರೆ ಆಯಾಮಗಳಲ್ಲೂ ಸಹ ಎಸ್‍ಐಟಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಈ ನಡುವೆ ಸನಾತನ ಸಂಸ್ಥಾ ಹೆಸರು ಕೆಡಿಸಲು ಗೌರಿ ಲಂಕೇಶ್ ಸಾವನ್ನ ನಮ್ಮ ತಲೆಗೆ ಕಟ್ಟುತ್ತಿದ್ದಾರೆ. ಗೌರಿ ಲಂಕೇಶ್ ಹತ್ಯೆಗೂ, ಕಲಬುರುಗಿ ಹತ್ಯೆಗೂ ಸಂಸ್ಥೆಗೂ ಸಂಬಂಧವಿಲ್ಲ ಎಂದು ಸಂಸ್ಥಾ ವಕ್ತಾರ ಚೇತನ್ ರಾಜಹನ್ಸ್ ಈ ಆರೋಪವನ್ನ ತಳ್ಳಿ ಹಾಕಿದ್ದಾರೆ.

ಸನಾತನ ಸಂಸ್ಥಾಗೆ ಮಸಿ ಬಳಿಯಲು ಹಿಂದೂ ವಿರೋಧಿಗಳು ಸಂಚು ರೂಪಿಸಿದ್ದಾರೆ. ತನಿಖೆಯ ದಿಕ್ಕನ್ನು ಬೇರೆಡೆಗೆ ತಿರುಗಿಸಲು ಹಿಂದೂ ವಿರೋಧಿಗಳು ಮಾಡಿರುವ ಷಡ್ಯಂತ್ರವಾಗಿದೆ ಶೀಘ್ರದಲ್ಲೇ ಸುದ್ದಿಗೋಷ್ಠಿ ಕರೆದು ಎಲ್ಲದಕ್ಕೂ ಸ್ಪಷ್ಟನೆ ನೀಡುತ್ತೇವೆ ಎಂದು ಹೇಳಿದ್ದಾರೆ.

ಸಂಸ್ಥಾದ ವಿಶೇಷತೆ: ಸನಾತನ ಸಂಸ್ಥಾಕ್ಕೆ ವಿಶೇಷ ಸಂವಿಧಾನವಿದ್ದು ಅದನ್ನು ಮರಾಠಿಯಲ್ಲಿ ರಚನೆಮಾಡಿದ್ದು 21 ಪುಸ್ತಕಗಳು- ಒಂದೊಂದು ಪುಸ್ತಕ 100 ಪುಟಗಳು ಅದರಲ್ಲಿವೆ, ಹಿಂದೂ ಧರ್ಮದ ವಿರುದ್ಧ ಮಾತನಾಡಿವರಿಗೆ ಶಿಕ್ಷೆ, ಹಿಂದೂ ಧರ್ಮದ ಉಳಿವಿಗಾಗಿ ಹೋರಾಟ, ಹಿಂದೂ ಧರ್ಮ ಎಷ್ಟು ಹಿಯಾಳಿಸುತ್ತಾರೋ ಅಷ್ಟು ಶಿಕ್ಷೆ, ಸ್ವಲ್ಪ ಮಟ್ಟದ ಹಿಯಾಳಿಕೆಯಾದರೆ ಬುದ್ಧಿವಾದ ಆದರೂ ಹೀಯಾಳಿಕೆ ಮುಂದುವರೆಸಿದರೆ ಕೈ ಕತ್ತರಿಸಿ, ಕಾಲು ಕತ್ತರಿಸುವುದು ಧರ್ಮಕ್ಕೆ ಕುತ್ತು ತರ್ತಾರೆ ಅಂದರೆ ಮೋಕ್ಷವೇ ಕೊನೆ ಎನ್ನುವುದು ಸಂಸ್ಥಾ ವಾದವಾಗಿದೆ ಅಂದ ಹಾಗೆ ಸಂಸ್ಥಾ ಕಾಂಗ್ರೆಸ್ ವಿರುದ್ಧವೂ ಕೆಲಸ ಮಾಡುತ್ತಿದೆ ಎಂಬುದಾಗಿಯೂ ಹೇಳಲಾಗುತ್ತಿದೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ