ಇವೆಲ್ಲ ಸುಮ್ಮನೆ ಭ್ರಮೆ...

Kannada News

15-09-2017

ಬೆಂಗಳೂರು: ಜಾತಿ ವ್ಯವಸ್ಥೆಯ ವಿರುದ್ಧ ಬಸವಣ್ಣನವರು ಹೋರಾಡಿದ್ದರೆ ಈಗ ಲಿಂಗಾಯತ ಎಂಬುದನ್ನೇ ಪ್ರತ್ಯೇಕ ಜಾತಿಯನ್ನಾಗಿ ರೂಪಿಸಲು ಹೋರಾಟ ನಡೆಯುತ್ತಿರುವ ಕುರಿತು ಖೇದ ವ್ಯಕ್ತಪಡಿಸಿರುವ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಇವೆಲ್ಲ ಸುಮ್ಮನೆ ಭ್ರಮೆ ಎಂದು ಟೀಕೆ ಮಾಡಿದ್ದಾರೆ. ಇಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರಿ ಆದೇಶದಂತೆ ನಿಮ್ಮ ಕಛೇರಿಯಲ್ಲಿ ಬಸವಣ್ಣನವರ ಫೋಟೋ ಹಾಕಿಲ್ಲವಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಬಸವಣ್ಣನವರು ನಡೆಸಿದ ಚಳವಳಿಯಿಂದ ಸಾಧ್ಯವಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.ಯಾಕೆ ಸಾಧ್ಯವಾಗಲಿಲ್ಲ ಎಂದರೆ, ಅವರು ಐಕ್ಯವಾದರು, ಐಕ್ಯವಾದರು ಎನ್ನುತ್ತಾರೆ ಎಂದು ನುಡಿದರು. ಬಸವಣ್ಣನವರಿಗೆ ಜಾತಿ ನಿರ್ಮೂಲನೆ ಮಾಡಲು ಸಾಧ್ಯವಿತ್ತು.ಅಲ್ಲಮಪ್ರಭುಗಳ ನೇತೃತ್ವದಲ್ಲಿ ರಚನೆಯಾದ ಅನುಭವ ಮಂಟಪದಲ್ಲಿ ವಿಚಾರವಂತರಿದ್ದರು.ಆದರೆ ಯಾವಾಗ ಬಸವಣ್ಣನವವರ ವಿರುದ್ಧ ಜಾತಿ ವ್ಯವಸ್ಥೆ ತಿರುಗಿ ಬಿತ್ತೋ?ಅದಾದ ನಂತರ ಅನುಭವ ಮಂಟಪದ ಹೆಸರಿನಲ್ಲಿ ಒಂದೆಡೆ ಕಲೆತಿದ್ದ ವಿಚಾರವಾದಿಗಳು ದಿಕ್ಕಾಪಾಲಾದರು.

ಈಗ ವೀರಶೈವ, ಲಿಂಗಾಯತ, ವೀರಶೈವ ಲಿಂಗಾಯತ ಎಂದು ಪ್ರತ್ಯೇಕ ಜಾತಿಗಳನ್ನು ಮಾಡಲು ಹೋರಾಟ ನಡೆದಿದೆ. ಆದರೆ ಇವೆಲ್ಲ ಭ್ರಮೆ. ಜನರನ್ನು ಸದಾ ಜಾಗೃತಿಯಲ್ಲಿಡುವ ಮೂಲಕ ನಾವು  ಮುನ್ನಡೆಯಬಹುದೇ ಹೊರತು ಬೇರೆ ಮಾರ್ಗವೇ ಇಲ್ಲ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ