ಶಾಸಕ ಪಿಳ್ಳಮುನಿಶಾಮಪ್ಪ ಅವರ ಗನ್‍ಮ್ಯಾನ್ ನಿಂದ ಪಿಸ್ತೂಲ್,ಮೊಬೈಲ್ ದೋಚಿದ್ದ ಕಳ್ಳರ ಬಂಧನ

Kannada News

23-03-2017

ಬೆಂಗಳೂರು, ಮಾ. 23 - ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ ಅವರ ಗನ್‍ಮ್ಯಾನ್ ಸಿಎಆರ್‍ನ ಹೆಡ್‍ಕಾನ್ಸ್‍ಟೇಬಲ್ ನರಸಿಂಹಮೂರ್ತಿಯ ಸರ್ವೀಸ್ ಪಿಸ್ತೂಲ್, ಮೊಬೈಲ್‍ಗಳನ್ನು ದೋಚಿ ಪರಾರಿಯಾಗಿದ್ದ ಮಂಗಳೂರಿನ ಇಬ್ಬರು ಖತರ್ನಾಕ್ ಕಳ್ಳರನ್ನು ಈಶಾನ್ಯ ವಿಭಾಗದ ಪೋಲಿಸರು ಬಂಧಿಸಿದ್ದಾರೆ.
ಮಂಗಳೂರಿನ ಸೂರತ್ಕಲ್‍ನ ಕುಳಾಯಿ ವನಗಟ್ಟಿಯ ಧನುಷ್ (19), ಸೂರತ್ಕಲ್‍ನ ಆಶ್ರಯ ಕಾಲೋನಿಯ ವಿಜಯ್ ಆಲಿಯಾಸ್ ಆಂಜನೇಯ (21) ಬಂಧಿತ ಆರೋಪಿಗಳಾಗಿದ್ದು ಬಂಧಿತರಿಂದ 1 ಪಿಸ್ತೂಲ್, 16 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೋಲಿಸ್ ಆಯುಕ್ತ ಪ್ರವೀಣ್ ಸೂದ್ ತಿಳಿಸಿದರು.
ಕಳೆದ ಫೆ. 24 ರಂದು ದೇವನಹಳ್ಳಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ವಾಪಸ್ ಪಡೆದಿದ್ದ ಪಿಳ್ಳಮುನಿಶಾಮಪ್ಪ ಅವರು, ಅಂದು ಬೆಳಿಗ್ಗೆಯಿಂದ ರಾತ್ರಿ 11ರ ವರೆಗೆ ಪಕ್ಷದ ಮುಖಂಡರುಗಳನ್ನು ಭೇಟಿ ಮಾಡಿ ವಿಶ್ರಾಂತಿಗೆಂದು ಕಮ್ಮಗೊಂಡನಹಳ್ಳಿಯ ಹನುಮಂತರೆಡ್ಡಿ ಅವರ ತೋಟದ ಮನೆಗೆ ಹೋಗುತ್ತಿದ್ದಾಗ ಜತೆಯಲ್ಲಿದ್ದ ಗನ್‍ಮ್ಯಾನ್ ನರಸಿಂಹಮೂರ್ತಿಯನ್ನು ಆಟೋದಲ್ಲಿ ಹೋಗುವಂತೆ ತಿಳಿಸಿದ್ದರು.
ನರಸಿಂಹಮೂರ್ತಿ ಆಟೋದಲ್ಲಿ ಯಲಹಂಕ ಉಪ ನಗರದ 4ನೇ ಹಂತದ ಮನೆಗೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ಉನ್ನಿಕೃಷ್ಣನ್ ರಸ್ತೆಯ ತಿರುಮಲ ಡಾಬಾ ಬಳಿ ಮೂತ್ರವಿಸರ್ಜನೆಗೆಂದು ಆಟೋದಿಂದ ಇಳಿದು ರಸ್ತೆಬದಿಗೆ ಹೋಗಿ ಅಲ್ಲೇ ನಿಶಕ್ತಿಗೊಳಗಾಗಿ ಕುಸಿದು ಬಿದ್ದರು.
ಅದನ್ನು ನೋಡಿ ಆಟೋಚಾಲಕ ಹೆದರಿ ಅವರನ್ನು ಅಲ್ಲೇ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದ. ನರಸಿಂಹಮೂರ್ತಿ ಅವರಿಗೆ ಮುಂಜಾನೆ 4ರ ವೇಳೆ ಪ್ರಜ್ಞೆ ಬಂದು ನೋಡಿದಾಗ ಸೊಂಟದಲ್ಲಿದ್ದ ಸರ್ವೀಸ್ ಪಿಸ್ತೂಲ್, ಮೊಬೈಲ್‍ಗಳು, ಪರ್ಸ್ ಕಳವಾಗಿತ್ತು. ಕೂಡಲೇ ಅವರು ಯಲಹಂಕ ಉಪ ನಗರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನರಸಿಂಹಮೂರ್ತಿ ಅವರು ಸರ್ವೀಸ್ ಪಿಸ್ತೂಲ್, ಮೊಬೈಲ್‍ಗಳನ್ನು ದುಷ್ಕರ್ಮಿಗಳು ದೋಚಿರುವ ಬಗ್ಗೆ ಯಲಹಂಕ ಉಪನಗರದ ಪೊಲೀಸರಿಗೆ ದೂರು ದಾಖಲಿಸಿದ್ದು ತನಿಖೆ ಕೈಗೊಳ್ಳಲಾಗಿತ್ತು  ಮೊಬೈಲ್ ಹಾಗೂ ಪಿಸ್ತೂಲ್‍ನ್ನು ಮಂಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಈಶಾನ್ಯ ವಿಭಾಗದ ಪೆÇಲೀಸರಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಗಳು ಪಿಸ್ತೂಲ್‍ನ್ನು ಅಪರಾಧ ಕೃತ್ಯಗಳಲ್ಲಿ ತೊಡಗಿರುವವರಿಗೆ ಮಾರಾಟ ಮಾಡುವ ಯತ್ನಸುತ್ತಿದ್ದ ಮಾಹಿತಿ ಇದ್ದು, ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಅಲ್ಲದೆ, ಅವರ ಹಿಂದಿನ ಅಪರಾಧ ಕೃತ್ಯದ ಬಗ್ಗೆಯೂ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಆರೋಪಿ ಧನುಷ್ ಪೇಯಿಂಟಿಂಗ್ ಕೆಲಸ ಮಾಡುತ್ತಿದ್ದರೆ, ಮತ್ತೊಬ್ಬ ಆರೋಪಿ ವಿಜಯ್ ಐಸ್ಕ್ರೀಮ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಒಂದೂವರೆ ವರ್ಷದ ಹಿಂದೆ ಪರಿಚಯವಾಗಿದ್ದ ಇವರಿಬ್ಬರು ಸಿಗರೇಟ್, ಗಾಂಜಾ ಇನ್ನಿತರ ದುಷ್ಚಟಗಳಿಗೆ ಬಲಿಯಾಗಿ, ಮಂಗಳೂರಿನಲ್ಲಿ ಸಾರ್ವಜನಿಕರನ್ನು ಬೆದರಿಸಿ ಮೊಬೈಲ್, ಪರ್ಸ್ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ದೋಚಿ ಮೋಜಿನ ಜೀವನ ನಡೆಸುತ್ತಿದ್ದರು
ಇವರಿಬ್ಬರೂ ಕಳ್ಳರು ಕಳೆದ ಫೆ. 23 ರಂದು ಮಂಗಳೂರಿನಿಂದ ಬೈಕ್‍ನಲ್ಲಿ ಹೊರಟು 24 ರಂದು ನಗರ ತಲುಪಿ ಯಶವಂತಪುರ ಲಾಡ್ಜ್‍ವೊಂದರಲ್ಲಿ ತಂಗಿದ್ದರು.
ಅಂದು ರಾತ್ರಿ 11ರ ವೇಳೆ ಕಳವು ಮಾಡಲು ಬೈಕ್‍ನಲ್ಲಿ ಹೊರಟು ಯಲಹಂಕದ ಉನ್ನಿಕೃಷ್ಣನ್ ರಸ್ತೆಯ ತಿರುಮಲ ಡಾಬಾ ಬಳಿ ಸುತ್ತಾಡುತ್ತಿದ್ದರು.
ಈ ವೇಳೆ ಶಾಸಕ ಪಿಳ್ಳಮುನಿಶಾಮಪ್ಪ ಅವರ ಗನ್ಮ್ಯಾನ್ ಆಗಿದ್ದ ಸಶಸ್ತ್ರ ಮೀಸಲು ಪಡೆಯ ಹೆಡ್‍ಕಾನ್ಸ್‍ಟೇಬಲ್ ನರಸಿಂಹಮೂರ್ತಿ ಅವರು, ನಿಶ್ಯಕ್ತಿಯಿಂದ ಕುಸಿದು ರಸ್ತೆಬದಿ ಬಿದ್ದಿರುವುದನ್ನು ನೋಡಿ ಅವರ ಬಳಿಯಿದ್ದ ಸರ್ವೀಸ್ ರಿವಾಲ್ವರ್, 2 ಮೊಬೈಲ್, 6.5 ಸಾವಿರ ರೂ.ಗಳಿದ್ದ ಪರ್ಸನ್ನು ದೋಚಿದ್ದರು.
ಅಲ್ಲಿಂದ ಯಶವಂತಪುರ ಲಾಡ್ಜ್‍ಗೆ ದಾರಿ ಗೊತ್ತಾಗದೇ ಕಳವು ಮಾಡಿದ ಮೊಬೈಲ್‍ನಲ್ಲೇ ಗೂಗಲ್ ರೂಟ್ ಮ್ಯಾಪ್ ಹಾಕಿಕೊಂಡು ಯಶವಂತಪುರ ಲಾಡ್ಜ್‍ತಲುಪಿ ಬೆಳಿಗ್ಗೆವರೆಗೆ ಅಲ್ಲೇ ಇದ್ದು, ನಂತರ ರೂಂ ಖಾಲಿ ಮಾಡಿ ಕಳವು ಮಾಡಿದ ಮೊಬೈಲ್‍ಗಳಲ್ಲಿ ತಲಾ ಒಂದೊಂದು ತೆಗೆದುಕೊಂಡು ಪಿಸ್ತೂಲನ್ನು ಜತೆಯಲ್ಲಿಟ್ಟುಕೊಂಡು ಮಂಗಳೂರಿಗೆ ಪರಾರಿಯಾದರು.
ನರಸಿಂಹಮೂರ್ತಿ ಅವರು ಸರ್ವೀಸ್ ಪಿಸ್ತೂಲ್, ಮೊಬೈಲ್‍ಗಳನ್ನು ದುಷ್ಕರ್ಮಿಗಳು ದೋಚಿರುವ ಬಗ್ಗೆ ಯಲಹಂಕ ಉಪನಗರದ ಪೊಲೀಸರಿಗೆ ದೂರು ದಾಖಲಿಸಿದ್ದು ತನಿಖೆ ಕೈಗೊಳ್ಳಲಾಗಿತ್ತು  ಮೊಬೈಲ್ ಹಾಗೂ ಪಿಸ್ತೂಲ್‍ನ್ನು ಮಂಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಈಶಾನ್ಯ ವಿಭಾಗದ ಪೋಲಿಸರಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಗಳು ಪಿಸ್ತೂಲ್ನ್ನು ಅಪರಾಧ ಕೃತ್ಯಗಳಲ್ಲಿ ತೊಡಗಿರುವವರಿಗೆ ಮಾರಾಟ ಮಾಡುವ ಯತ್ನಸುತ್ತಿದ್ದ ಮಾಹಿತಿ ಇದ್ದು, ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಅಲ್ಲದೆ, ಅವರ ಹಿಂದಿನ ಅಪರಾಧ ಕೃತ್ಯದ ಬಗ್ಗೆಯೂ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೋಲಿಸ್ ಆಯುಕ್ತ ಹೇಮಂತ್ ನಿಂಬಾಳ್ಕರ್, ಡಿಸಿಪಿ ಹರ್ಷ ಅವರಿದ್ದರು.
ಬಾಕ್ಸ್ 1
ಗಾಂಜಾ ದುಶ್ಚಟ
ಆರೋಪಿ ಧನುಷ್ ಪೇಯಿಂಟಿಂಗ್ ಕೆಲಸ ಮಾಡುತ್ತಿದ್ದರೆ, ಮತ್ತೊಬ್ಬ ಆರೋಪಿ ವಿಜಯ್ ಐಸ್ಕ್ರೀಮ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರಿಬ್ಬರಿಗೆ , ಒಂದೂವರೆ ವರ್ಷದ ಹಿಂದೆ ಪರಿಚಯವಾಗಿತ್ತು ಅಲ್ಲಿಂದ ಇವರಿಬ್ಬರು ಸಿಗರೇಟ್, ಗಾಂಜಾ ಇನ್ನಿತರ ದುಷ್ಚಟಗಳಿಗೆ ಬಲಿಯಾಗಿ, ಮಂಗಳೂರಿನಲ್ಲಿ ಸಾರ್ವಜನಿಕರನ್ನು ಬೆದರಿಸಿ ಮೊಬೈಲ್, ಪರ್ಸ್ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ದೋಚಿ ಮೋಜಿನ ಜೀವನ ನಡೆಸುತ್ತಿದ್ದರು
  
ಬಾಕ್ಸ್ 2
ಆರೋಪಿಗಳಾದ ಧನುಷ್ ಹಾಗೂ ವಿಜಯ್ ಕಳವು ಮಾಡಿದ್ದ  ಪಿಸ್ತೂಲನ್ನು  ಅಪರಾಧ ಕೃತ್ಯಗಳಲ್ಲಿ ತೊಡಗಿರುವವರಿಗೆ ಮಾರಾಟ ಮಾಡುವ ಯತ್ನಸುತ್ತಿದ್ದ ಮಾಹಿತಿ ದೊರೆತಿದೆ ಅವರ್ಯಾರು ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗಿದೆ ಅಲ್ಲದೆ, ಆರೋಪಿಗಳ ಹಿಂದಿನ ಅಪರಾಧ ಕೃತ್ಯಗಳ  ಬಗ್ಗೆಯೂ ತನಿಖೆ ಕೈಗೊಳ್ಳಲಾಗಿದೆ ಎಂದು ನಗರ ಪೋಲಿಸ್ ಆಯುಕ್ತ ಪ್ರವೀಣ್ ಸೂದ್ ತಿಳಿಸಿದ್ದಾರೆ.

Links :ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ