ಬೈಕ್ ಗೆ ಲಾರಿ ಡಿಕ್ಕಿ: ವ್ಯಕ್ತಿ ಸಾವು !    

Kannada News

15-09-2017

ಬೆಂಗಳೂರು: ಗೊರಗುಂಟೆಪಾಳ್ಯದ ಎಂಇಎಸ್ ರೈಲ್ವೆ ಗೇಟ್ ಬಳಿ, ನಿನ್ನೆ ರಾತ್ರಿ ಹಿಂದಿನಿಂದ ವೇಗವಾಗಿ ಲಾರಿ ಡಿಕ್ಕಿ ಹೊಡೆದು ಬೈಕ್‍ ನಲ್ಲಿ ಹೋಗುತ್ತಿದ್ದ ಯುವಕನೊಬ್ಬ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ನಂದಿನಿಲೇಔಟ್‍ ನ ಕಂಠೀರವ ನಗರದ ಸಂತೋಷ್(22)ಎಂದು ಗುರುತಿಸಲಾಗಿದೆ. ಕೊರಿಯರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್, ರಾತ್ರಿ 9.45ರ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಬೈಕ್‍ ನಲ್ಲಿ ಬುರುತ್ತಿದ್ದಾಗ, ಮಾರ್ಗ ಮಧ್ಯೆ ಎಂಇಎಸ್ ರೈಲ್ವೆ ಗೇಟ್ ಬಳಿಯ ವರ್ತುಲ ರಸ್ತೆಯಲ್ಲಿ ಎಡಗಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದು ಹಿಂಬದಿ ಚಕ್ರಕ್ಕೆ ಸಿಲುಕಿದ ಸಂತೋಷ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಯಶವಂತಪುರ ಸಂಚಾರ ಪೊಲೀಸ್ ಇನ್ಸ್ ಪೆಕ್ಟರ್ ಸದಾನಂದ ಅವರು ಲಾರಿ ಚಾಲಕನನ್ನು ವಶಕ್ಕೆ ತೆಗೆದುಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಶಿವಕುಮಾರ್ ತಿಳಿಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ