ಕಾಯಿಲೆಗಳು ಹೆಚ್ಚಾಗಲು ಜನಸಂಖ್ಯೆ ಕಾರಣ !

Kannada News

15-09-2017

ಬೆಂಗಳೂರು: ಇತ್ತೀಚೆಗೆ ಮೂತ್ರಪಿಂಡದ ಕಾಯಿಲೆಯಿಂದ ನರಳುವವರ ಸಂಖ್ಯೆ ಹೆಚ್ಚಿದೆ, ಕಾಯಿಲೆಗಳು ಹೆಚ್ಚಾಗಲು ಜನಸಂಖ್ಯೆ ಹೆಚ್ಚಳ ಕಾರಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇಂದಿಲ್ಲಿ ಮಾತನಾಡಿದ ಅವರು, ಕೆಲವು ಕಾಯಿಲೆಗಳನ್ನು ವಾಸಿ ಮಾಡಬಹುದು, ಕೆಲವು ಸಾಧ್ಯವಿಲ್ಲ. ಡಯಾಬಿಟೀಸ್ ಸಕ್ಕರೆ ಕಾಯಿಲೆ ಸಂಪೂರ್ಣ ಗುಣಪಡಿಸಲು ಸಾಧ್ಯವಿಲ್ಲ. ಆದರೆ, ವಿವಿದ ವೈದ್ಯಪದ್ದತಿಗಳ ಮೂಲಕ ಅದನ್ನು ಗುಣಪಡಿಸಲು ಸಾಧ್ಯ ಅಂತಾರೆ. ಆದರೆ ಅಲೋಪತಿ ಬಿಟ್ಟು ಬೇರೆ ಪದ್ದತಿ ಅನುಸರಿಸಲು ಪ್ರಯತ್ನಿಸಿ ಹಲವರು ಮೃತಪಟ್ಟಿದ್ದಾರೆ.

ನನಗೂ ಕೂಡ ಸಕ್ಕರೆ ಕಾಯಿಲೆ ಇದೆ, ಅದನ್ನು ಕಾಯಿಲೆ ಅನ್ನೋದಕ್ಕಿಂತ ದೇಹದೊಳಗಿನ ಏರುಪೇರು ಎನ್ನಬಹುದು. ಸಕ್ಕರೆ ಕಾಯಿಲೆ ವಿವಿದ ರೋಗಗಳಿಗೆ, ಅಂಗಾಂಗ ವೈಫಲ್ಯಗಳಿಗೆ ಕಾರಣವಾಗುತ್ತದೆ ಎನ್ನುವಾಗಲೇ, ಮಧ್ಯೆ ಮಾತನಾಡಿದ ಮಾಜಿ ಸಚಿವ ರಾಮಚಂದ್ರಗೌಡ ತಾವು ಮೂವತ್ತು ವರ್ಷದಿಂದ ಸಕ್ಕರೆ ಕಾಯಿಲೆಗೆ ತುತ್ತಾಗಿದ್ದು, ಈ ಕಾಯಿಲೆ ಜೀವನದಲ್ಲಿ ಶಿಸ್ತು ಕಲಿಸುತ್ತದೆ ಎಂದರು. ಅದಕ್ಕೆ ನಿನ್ನ ರೀತಿ ಇದ್ದರೆ ಅದು ಸಾಧ್ಯ. ಈಗ ರಾಮಚಂದ್ರಗೌಡರಿಗೆ 79 ವರ್ಷ. ಇದೇ ಶಿಸ್ತು ಮುಂದುವರಿಸಿದ್ರೆ ಇನ್ನೂ 20 ವರ್ಷ ಬದುಕಿರ್ತಾರೆ ಅಂತಾ ಚಟಾಕಿ ಹಾರಿಸಿದರು. ರಾಜಕಾರಣಿಗಳಿಗೆ ಮಾನಸಿಕ ಒತ್ತಡ ಹೆಚ್ಚಿರುವ ಕಾರಣ ಡಯಾಬಿಟಿಸ್ ಉಲ್ಬಣಗೊಳ್ಳುತ್ತದೆ ಎಂದರು.

ನಮ್ಮೂರಿನಲ್ಲಿ ಅತಿಸಾರ ಬೇಧಿ ಆದ್ರೆ ರಂಗಯ್ಯ ಎಂಬಾತ ಧೂಳಿ ಕುಡಿಸುತ್ತಿದ್ದ ವಾಸಿಯಾಗುತ್ತಿತ್ತು. ಕೆ.ಆರ್.ನಗರದ ಮಾಜಿ ಶಾಸಕ ಮಂಚನಹಳ್ಳಿ ಮಾದೇವು ನನಗೆ ಆತ್ಮೀಯ. ಆದರೆ,ಆತ ಡಯಾಬಿಟೀಸ್ ಚಿಕಿತ್ಸೆ ಬಗ್ಗೆ ನಿರ್ಲಕ್ಷ್ಯ ಮಾಡಿದ, ಪರಿಣಾಮ ಹಾರ್ಟ್ ಅಟ್ಯಾಕ್ ನಿಂದ ಸತ್ತ ಎಂದರು. ಸಿಎಂ ಮಾತು ಮುಂದುವರೆಸಿ, ಯಾವ ದೇವರೂ ಮನುಷ್ಯನ ಆಯಸ್ಸು ಹಣೆ ಮೇಲೆ ಬರೆಯಲ್ಲ. ಹಾಗೆ ಬರೆದ್ರೆ ದೇವರು ಪಕ್ಷಪಾತ ಮಾಡಿದ ಹಾಗೆ ಆಗುತ್ತದೆ. ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕಾದವರು ನಾವೇ, ಸರಿಯಾಗಿ ಆರೋಗ್ಯ ಕಾಪಾಡಿಕೊಳ್ಳದೆ ಪ್ರಾಣತೆತ್ತು, ದೇವರು ಆಯುಷ್ಯ ಬರೆದಿದ್ದು ಇಷ್ಟೇ ಅಂತಾ ಹೇಳ್ತಾರೆ ಇದು ಸರಿಯಲ್ಲ ಎಂದರು.                       ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ