ಬಲಿಜ ಸಮಾಜ: 2ಎ ಗೆ ಸೇರಿಸುವಂತೆ ಮನವಿ !

Kannada News

15-09-2017

ಬೆಂಗಳೂರು: ಯೋಜನೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಂ ಹಾಗೂ ಮೇಯರ್ ಜಿ.ಪದ್ಮಾವತಿ ನೇತೃತ್ವದಲ್ಲಿ ಬಲಿಜ ಸಮಾಜದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ತಮ್ಮ ಸಮಾಜವನ್ನು 2 A ಗೆ ಸೇರಿಸಲು ಶಿಫಾರಸು ಮಾಡುವಂತೆ ಮನವಿ ಸಲ್ಲಿಸಿದರು.

ಬಳಿಕ ಸಚಿವ ಎಂ.ಆರ್.ಸೀತಾರಾಂ ಸುದ್ದಿಗಾರರೊಂದಿಗೆ ಮಾತನಾಡಿ, ಬಲಿಜ ಸಮುದಾಯಕ್ಕೆ ಶಿಕ್ಷಣದಲ್ಲಿ 2ಎ ಮೀಸಲಾತಿ ಇದೆ. ಉದ್ಯೋಗ ಮತ್ತು ರಾಜಕೀಯದಲ್ಲೂ ಮೀಸಲಾತಿ ಕೊಡಬೇಕೆಂದು ಕೇಳಿದ್ದೇವೆ ಎಂದರು. ಧನಾತ್ಮಕವಾಗಿ ಸಿಎಂ ಪ್ರತಿಕ್ರಿಯಿಸಿದ್ದಾರೆ.  ಈಗಾಗಲೇ ಕೇಂದ್ರದಿಂದ ಗೆಜೆಟ್ ಆಗಿ ಬಂದಿದೆ. ಅದು ಜಾರಿಯಾಗಬೇಕು. ಇದು ರಾಜ್ಯದ  ಹಿಂದುಳಿದ ವರ್ಗಗಳ  ಆಯೋಗಕ್ಕೆ ಬರುತ್ತದೆ. ಇಲ್ಲಿ ಪಟ್ಟಿಗೆ ಸೇರಿಸಬೇಕು. ಈ ಬಗ್ಗೆ ನಾಲ್ಕೈದು ತಿಂಗಳ ಹಿಂದೆ ಕೇಳಿದ್ದೆವು. ಮತ್ತೆ ನೆನಪಿಸಲು ಬಂದಿದ್ದೆವು ಎಂದು ಸಚಿವ ಎಂ.ಆರ್.ಸೀತಾರಾಮ್ ಹೇಳಿದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ