ರಸ್ತೆ ಅವ್ಯವಸ್ಥೆ: ಅಣುಕು ಪ್ರದರ್ಶನ !

Kannada News

15-09-2017 327

ಉಡುಪಿ: ಉಡುಪಿಯ ಮಣಿಪಾಲ ರಸ್ತೆ ಅವ್ಯವಸ್ಥೆ ಖಂಡಿಸಿ ಅಣಕು ಪ್ರದರ್ಶನ ನಡೆಸಲಾಯಿತು, ಜಿಲ್ಲಾ ನಾಗರಿಕ ಸಮಿತಿಯಿಂದ ನಡೆಸಿದ ಪ್ರತಿಭಟನೆಯಲ್ಲಿ, ರಸ್ತೆಯಲ್ಲೇ ಉರುಳು ಸೇವೆ ಮಾಡಿದ್ದಾರೆ. ಅಲ್ಲದೇ ಕಿರುತೆರೆ ನಟ ಶ್ರೀಪಾದ್ ಅವರಿಂದ ಪ್ರತಿಭಟನಾ ಅಣಕು ಪ್ರದರ್ಶನವನ್ನೂ ಮಾಡಿದರು. ಉರುಳು ಸೇವೆ ನಡೆಸಿದ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಂದ, ಸ್ಟ್ರೆಚರ್ ನಲ್ಲಿ ರೋಗಿಯ ಪಾಡು ಪ್ರದರ್ಶನ ಮಾಡಲಾಯಿತು. ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ ಇವರು, ಈ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಗಮನ ಹರಿಸುವಂತೆ ಒತ್ತಾಯಿಸಿದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ