ಕ್ವಿಜ್ ಮಾಸ್ಟರ್ ಆದ ಯದುವೀರ್ !

Kannada News

15-09-2017

ಮೈಸೂರು: ಮೊನ್ನೆಯಷ್ಟೇ ಮೈಸೂರಿನ ರಾಜವಂಶಸ್ಥ ಯದುವೀರ್ ಸರ್ಕಾರಿ ಶಾಲೆಯಲ್ಲಿ, ಮಕ್ಕಳಿಗೆ ಪಾಠ ಹೇಳುವ ಮೂಲಕ ಗಮಸ ಸೆಳೆದಿದ್ದರು. ಇದೀಗ ಕ್ವಿಜ್ ಮಾಸ್ಟರ್ ಆದ ರಾಜವಂಶಸ್ಥ ಯದುವೀರ್, ಮೈಸೂರಿನ ವೆಂಪುನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ವಿಜ್ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕ್ವಿಜ್ ಮಾಸ್ಟರ್ ಆಗಿ ಪ್ರಶ್ನೆ ಕೇಳಿದರು. ಕಲಿಸು ಫೌಂಡೇಶನ್ ಸಂಸ್ಥೆಯಿಂದ ಆಯೋಜಿಸಿದ್ದ ಕಾರ್ಯಕ್ರಮವಾಗಿದ್ದು, ಅಂತಿಮ ಸುತ್ತಿಗೆ ಬಂದಿದ್ದ 14 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಕ್ವಿಜ್ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸುಮಾರು 4000 ಮಕ್ಕಳು ಭಾಗಿಯಾಗಿದ್ದರು. ಇದೀಗ ಅಂತಿಮ ಸುತ್ತಿನಲ್ಲಿ ಮಹಾರಾಜ ಯದುವೀರ್ ಒಡೆಯರ್ ಮಾಸ್ಟರ್ ಆಗಿದ್ದಾರೆ. ಒಟ್ಟು ಆರು ಸುತ್ತುಗಳು ಇತರೆ ಗಣ್ಯರು ಮಾಸ್ಟರ್ ಆಗಿದ್ದರು. ಮಹಾರಾಜರ ಪ್ರಶ್ನೆಗಳಿಗೆ ಮಕ್ಕಳು ಸೂಕ್ತ ಉತ್ತರ ನೀಡಿದ್ದು, ಯದುವೀರ್, ಕ್ವಿಜ್‌ನಲ್ಲಿ ಸಂತಸದಿಂದ ಭಾಗಿಯಾದರು.


ಸಂಬಂಧಿತ ಟ್ಯಾಗ್ಗಳು

ಮೈಸೂರು ಕ್ವಿಜ್ ಮಾಸ್ಟರ್ ಯದುವೀರ್ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ