ಡಿಸಿ ಕಚೇರಿಯಲ್ಲಿ ಕಳ್ಳತನ !

Kannada News

15-09-2017

ಚಿತ್ರದುರ್ಗ: ಕಳ್ಳರು ಡಿಸಿ ಕಚೇರಿಗೆ ಕನ್ನ ಹಾಕಿರುವ ಘಟನೆಯು ಚಿತ್ರದುರ್ಗದಲ್ಲಿ ನಡೆದಿದೆ. ಕಳೆದ ಎರಡು ದಿನಗಳ‌ ಹಿಂದೆ ಕಳ್ಳತನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಡಿಸಿ ಕಚೇರಿಯ ಆಧಾರ್ ನೊಂದಣಿ ಕೊಠಡಿಯಲ್ಲಿದ್ದ ಎರಡು ಲ್ಯಾಪ್ ಟಾಪ್ ಹಾಗೂ ಒಂದು ವೆಬ್ ಕ್ಯಾಮರವನ್ನು ಚಾಲಾಕಿ ಕಳ್ಳರು ಕದ್ದೊಯ್ದಿದ್ದಾರೆ. ಸುಮಾರು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಆಧಾರ್ ನೊಂದಣಿ ಲ್ಯಾಪ್ ಟಾಪ್, ಹಾಗೂ ವೆಬ್ ಕ್ಯಾಮರ ಕಳವು ಮಾಡಿದ್ದಾರೆ. ಈಗಾಗಲೇ ಕಳ್ಳರಿಗಾಗಿ, ಬಲೆ ಬೀಸಿರುವ ಪೊಲೀಸರು. ಚಿತ್ರದುರ್ಗದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ