ತಲೆ ಮೇಲೆ ಬಿದ್ದ ರೆಂಬೆ: ವ್ಯಕ್ತಿ ದುರ್ಮರಣ !

Kannada News

15-09-2017

ಮೈಸೂರು: ಬಸ್ ಸ್ವಚ್ಛಗೊಳಿಸಿ ನಿಂತಿದ್ದ ವ್ಯಕ್ತಿಯೊರ್ವರ ತಲೆಯ ಮೇಲೆ ಮರದ ರೆಂಬೆಯೊಂದು ಮುರಿದು ಬಿದ್ದ ಪರಿಣಾಮ, ವ್ಯಕ್ತಿ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿಂದು ನಡೆದಿದೆ.

ಮೃತ ವ್ಯಕ್ತಿಯನ್ನು ಮೈಸೂರು ತಾಲ್ಲೂಕಿನ ರಮ್ಮನಹಳ್ಳಿ ಗ್ರಾಮದ ನಿವಾಸಿ ಮಂಚಯ್ಯ(45) ಎಂದು ಗುರ್ತಿಸಲಾಗಿದೆ. ಮೃತ ಮಂಚಯ್ಯ ಎಸ್.ಎಸ್.ಟಿ ಹೆಸರಿನ ಖಾಸಗಿ ಬಸ್ಸಿನಲ್ಲಿ ಕ್ಲೀನರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇಂದು ಬೆಳಿಗ್ಗೆ ಮೈಸೂರಿನ ಉಡ್ ಲ್ಯಾಂಡ್ ಚಿತ್ರಮಂದಿರದ ಎದುರು ವಾಹನವನ್ನು ಸ್ವಚ್ಛಗೊಳಿಸುತ್ತಾ ನಿಂತಿದ್ದರು. ಈ ವೇಳೆ ಅಲ್ಲಿಯೇ ಇದ್ದ ಹಳೆಯ ಮರದ ರೆಂಬೆಯೊಂದು ಇದ್ದಕ್ಕಿದ್ದಂತೆ ಮುರಿದು ಮಂಚಯ್ಯ ತಲೆಯ ಮೇಲೆ ಬಿದ್ದಿದೆ. ಕೂಡಲೇ ಇವರನ್ನು ಕೆ.ಆರ್.ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತಾದರೂ, ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಸುದ್ದಿ ತಿಳಿದ ಪೊಲೀಸರು ಘಟನಾ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.  ಈ ಸಂಬಂಧ ಲಷ್ಕರ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ