ದೊಡ್ಡಣ್ಣನ ಅಳಿಯನ ಮನೆಯಲ್ಲಿ ಕಳ್ಳತನ !

Kannada News

15-09-2017

ಚಿತ್ರದುರ್ಗ: ಚಿತ್ರದುರ್ಗದ ಚಳ್ಳಕೆರೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಮೂವರು ಮನೆಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಹಳೇಟೌನ್ ನಿವಾಸಿ ವೀರೇಂದ್ರ ಅಲಿಯಾಸ್ ಪಪ್ಪಿ ಎಂಬುವರ ಮನೆ ಕಳ್ಳತನ ಮಾಡಿದ್ದ, ಮೂವರನ್ನು ಬಂಧಿಸಿದ್ದಾರೆ, ಬಂಧಿತರಿಂದ 17 ಕೆ.ಜಿ ಚಿನ್ನದ ಗಟ್ಟಿಗಳು ಹಾಗೂ 10 ಲಕ್ಷ ರೂ ನಗದು ವಶಪಡಿಸಿಕೊಂಡಿದ್ದಾರೆ. ರಾಕಿ(25), ಮಂಜುನಾಥ್ (31) ಹಾಗೂ ಪಾಲಯ್ಯ ಬಂಧಿತ ಆರೋಪಿಗಳು. ಕಳ್ಳತನ ನಡೆದ ನಾಲ್ಕೇ ದಿನಗಳಲ್ಲಿ ಪ್ರಕರಣವನ್ನು, ಚಳ್ಳಕೆರೆ ಸಿಪಿಐ ತಿಮ್ಮಣ್ಣ ನೇತೃತ್ವದ ತಂಡ ಭೇದಿಸಿದ್ದಾರೆ.

ಚಿತ್ರನಟ ದೊಡ್ಡಣ್ಣ ಅವರ ಅಳಿಯ ವೀರೇಂದ್ರ ಅಲಿಯಾಸ್ ಪಪ್ಪಿ, ಪಪ್ಪಿ ನಿವಾಸ ಹಾಗೂ ಸಹೋದರನ ಮನೆಯಿಂದ 21 ಕೆ.ಜಿ ಚಿನ್ನದ ಗಟ್ಟಿಗಳು ಮತ್ತು 10ಲಕ್ಷದ 70ಸಾವಿರ ರೂ ನಗದು ಕದ್ದು, ಖದೀಮರು ಪರಾರಿಯಾಗಿದ್ದರು. ಬಂಧಿತರು ಪಪ್ಪಿ ಬಳಿ ಕೆಲಸಕ್ಕಿದ್ದವರು ಎಂದು ತಿಳಿದು ಬಂದಿದೆ.

ಚಿನ್ನದ ಗಟ್ಟಿಗಳನ್ನು ಮಹಾರಾಷ್ಟ್ರ ಆಂಧ್ರ ಗೋವಾ ಸೇರಿದಂತೆ ವಿವಿಧ ರಾಜ್ಯಗಳಿಗೆ ಕಡಿಮೆ ಬೆಲೆಯಲ್ಲಿ ಮಾರಾಟಮಾಡಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ