ಕಲ್ಯಾಣಿ ಗ್ರೂಪ್: ಕಚೇರಿಗಳ ಮೇಲೆ ಐಟಿ ದಾಳಿ !

Kannada News

14-09-2017

ಬೆಂಗಳೂರು: ತೆರಿಗೆ ವಂಚಕರ ವಿರುದ್ದದ ಬೇಟೆಯನ್ನು ಮುಂದುವರೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಲ್ಯಾಣಿ ಸಮೂಹ ಕಚೇರಿಗಳ ಮೇಲೆ ಎಕಕಾಲಕ್ಕೆ ದಾಳಿ ನಡೆಸಿ, ನಗದು ಆಸ್ತಿ-ಪಾಸ್ತಿಯ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು, ಚೆನ್ನೈ, ಹೈದರಾಬಾದ್‍ ನಲ್ಲಿ ಕಲ್ಯಾಣಿ ಮೋಟಾರ್ಸ್ ಗ್ರೂಪ್‍ಗೆ ಸೇರಿದ 21 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ಆಪಾರ ಪ್ರಮಾಣದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನ ನಾಯಂಡಹಳ್ಳಿ, ಬನ್ನೇರುಘಟ್ಟ, ಚೆನ್ನೈ, ಹೈದರಾಬಾದ್ ಸೇರಿದಂತೆ ಕಲ್ಯಾಣಿ ಮೋಟಾರ್ಸ್ ಕಂಪನಿಗಳ ಮೇಲೆ ದಾಳಿ ನಡೆಸಿ ದಾಖಲೆ, ಲೆಕ್ಕಪತ್ರ ಪರಿಶೀಲನೆ ನಡೆಸುತ್ತಿದ್ದಾರೆ. ಕಲ್ಯಾಣಿ  ಡೆವಲಪರ್ಸ್ ಮೋಹನ್ ರಾಜು ಅವರಿಗೆ ಸೇರಿದ ಕಂಪನಿಯಾಗಿದ್ದು, 1991ರಿಂದ ಕಾರ್ಯ ನಿರ್ವಹಿಸುತ್ತಿವೆ. ಕಲ್ಯಾಣಿ ಡೆವಲಪರ್ಸ್‍ಗಳಿಗೆ ಸೇರಿದ 21 ಕಡೆಗಳಲ್ಲಿ ಅಧಿಕಾರಿಗಳು ಶೋಧ ಕಾರ್ಯ ಕೈಗೊಂಡಿದ್ದಾರೆ.

ಕಲ್ಯಾಣಿ ಪ್ಲಾಟಿನಾ, ಕಲ್ಯಾಣಿ ವಿಸ್ತಾ, ಕೃಷ್ಣ ಮ್ಯಾಗ್ನಮ್, ಕಲ್ಯಾಣಿ ಟವರ್ಸ್ ಹಾಗೂ ರಿಂಗ್ ರೋಡ್‍ ನಲ್ಲಿರುವ ಕಲ್ಯಾಣಿ ಟಕ್‍ ಪಾರ್ಕ್ ಸೇರಿದಂತೆ ಆಪಾರ ಆಸ್ತಿಪಾಸ್ತಿಗಳು ಕಲ್ಯಾಣಿ ಡೆವಲಪರ್ಸ್ ಸಂಸ್ಥೆ ಹೆಸರಿನಲ್ಲಿದೆ. ಇದಲ್ಲದೆ ಕಲ್ಯಾಣಿ ಮೋಟಾರ್ಸ್ ಸೇರಿದಂತೆ ಹಲವು ಕಂಪನಿಗಳಿಗೆ ಮೋಹನ್ ರಾಜು ನಿರ್ದೇಶಕರಾಗಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ