ಗಂಡನಿಗೆ ಸ್ಕೆಚ್: ಪತ್ನಿ-ಪ್ರಿಯಕರ ಬಂಧನ !

Kannada News

14-09-2017

ಬೆಂಗಳೂರು: ಅಕ್ರಮ ಸಂಬಂಧವನ್ನು ಪ್ರಶ್ನಿಸಿ ಜಗಳ ಮಾಡುತ್ತಿದ್ದ ಪತಿಯ ಕೊಲೆಗೆ ಸಂಚು ರೂಪಿಸಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.

ಜ್ಯೋತಿನಗರದ ಜಿ.ಎಸ್. ಶೈಲಜಾ(42) ಹಾಗೂ ಆಕೆ ಪ್ರಿಯಕರ ಆನಂದ್(50) ಬಂಧಿತ ಆರೋಪಿಗಳಾಗಿದ್ದಾರೆ. ಆಯಿಲ್ ವ್ಯಾಪಾರಿ ಪ್ರಸನ್ನ ಕುಮಾರ್ ಹಾಗೂ ಶೈಲಜಾ ವಿವಾಹ 20 ವರ್ಷಗಳ ಹಿಂದೆ ನಡೆದಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಐದು ವರ್ಷಗಳ ಹಿಂದೆ ಶೈಲಜಾಗೆ ರಿಯಲ್ ಎಸ್ಟೇಟ್ ಎಜೆಂಟ್ ಆಗಿದ್ದ ಆನಂದ್ ಜತೆ ಪರಿಚಯವಾಗಿ ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿದೆ. ಇದನ್ನು ತಿಳಿದ ಪ್ರಸನ್ನ ಕುಮಾರ್, ಪತ್ನಿಗೆ ಆನಂದ್ ಜತೆ ಸಂಪರ್ಕ ಕಡಿದುಕೊಳ್ಳುವಂತೆ ತಾಕೀತು ಮಾಡಿದ್ದರು. ಇದೇ ವಿಷಯವಾಗಿ ಸತಿ-ಪತಿ ಮಧ್ಯೆ ಜಗಳವಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗಲಾಟೆ ವಿಷಯ ತಿಳಿದ ಆನಂದ್, ಮೂರು ತಿಂಗಳ ಹಿಂದೆ ಉಲ್ಲಾಳು ಮುಖ್ಯರಸ್ತೆಯ ಕೂಲ್ ಪಾಯಿಂಟ್ ಹೋಟೆಲ್ ಬಳಿ ಪ್ರಸನ್ನ ಕುಮಾರ್ ಮೇಲೆ ಆನಂದ್ ಹಲ್ಲೆ ನಡೆಸಿದ್ದ. ಈ ಸಂಬಂಧ ಪೊಲೀಸರಿಗೆ ಪ್ರಸನ್ನ ದೂರು ನೀಡಿದ್ದರು. ಆಗ ಠಾಣೆಗೆ ಆನಂದ್ ಹಾಗೂ ಶೈಲಜಾ ಅವರನ್ನು ಕರೆಸಿದ ಪೊಲೀಸರು, ಅವರಿಗೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿ ಕೊಂಡು ಕಳುಹಿಸಿದ್ದರು. ಇದಾದ ನಂತರ ಆಗಸ್ಟ್ 29ರಂದು ಸಂಜೆ ನನ್ನ ಕೊಲೆ ಸಂಚು ರೂಪಿಸುವ ಸಂಬಂಧ ಆನಂದ್ ಜತೆ ಶೈಲಜಾ ಮೊಬೈಲ್ ಸಂಭಾಷಣೆ ಆಡಿಯೋ ಸಿಕ್ಕಿತು. ಅವರಿಬ್ಬರು ಊಟದಲ್ಲಿ ವಿಷ ಮಿಶ್ರಣ ಕೊಲ್ಲುವ ಸಂಚು ರೂಪಿಸಿದ್ದರು. ಕೂಡಲೇ ಜಾಗ್ರತಗೊಂಡು ಪೊಲೀಸರಿಗೆ ದೂರು ನೀಡಿದ್ದರು.

ರೆಕಾರ್ಡ್ ರಹಸ್ಯ: ಪತ್ನಿ ಶೈಲಜಾ ಮತ್ತು ರಿಯಲ್ ಎಸ್ಟೇಟ್ ಏಜೆಂಟ್ ಆನಂದ್ ನಡುವಿನ `ವಯಸ್ಕ ಪ್ರೇಮ' ಪ್ರಸಂಗವನ್ನು ಪ್ರಸನ್ನ ಪತ್ತೆ ಹಚ್ಚಿದ್ದು ರೋಚಕ ವಾಗಿದೆ. ಶೈಲಜಾ ಅವರು ತಮ್ಮ ಮಕ್ಕಳನ್ನು ಶಾಲೆಗೆ ಬಿಡಲು ಹೋಗುತ್ತಿದ್ದಾಗ ಆನಂದ್ ಪರಿಚಯವಾಗಿದೆ. ಆದರೆ ಈ ಸ್ನೇಹದ ಬಗ್ಗೆ ಶೈಲಜಾ ಪೋಷಕರಿಗೂ ಪ್ರಸನ್ನಕುಮಾರ್ ಹೇಳಿದರೂ ಯಾರೂ ನಂಬಲಿಲ್ಲ. ಇದರಿಂದ ಬೇಸರಗೊಂಡ ಅವರು, ಸಾಕ್ಷಿ ಸಮೇತ ಪ್ರೇಮ ಪ್ರಣಯ ಸಾಬೀತಪಡಿಸಲು ಮುಂದಾದರು.

ಆಗ ಪತ್ನಿಗೆ ತಿಳಿಯದೆ ಅವರ ಮೊಬೈಲ್‍ಗೆ ಸಂಭಾಷಣೆ ರೆಕಾರ್ಡ್ ಮಾಡಿಕೊಂಡಿದ್ದರು. ಹೀಗೆ ಶೈಲಜಾ ಹಾಗೂ ಆನಂದ್ ಮಾತನಾಡುವ ವೇಳೆ ಪ್ರಸನ್ನ ಕುಮಾರ್‍ ಗೆ ಒಂದು ಗತಿ ಕಾಣಿಸಬೇಕು ಎಂದು ಹೇಳಿಕೊಂಡಿದ್ದರು. ಈ ಮಾಹಿತಿಯನ್ನು ಪೊಲೀಸರು ಹಾಗೂ ಕುಟುಂಬದವರಿಗೆ ಪತ್ನಿ ವಿರುದ್ಧ ದೂರು ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ