ಪೊಲೀಸ್ ಸುತ್ತೋಲೆ: ವಿವಾದ !

Kannada News

14-09-2017

ಬೆಂಗಳೂರು: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ನಗರ ಪೊಲೀಸರು ಹೊಡಿಸಿದ್ದ ಸುತ್ತೋಲೆ ವಿವಾದಕ್ಕೆ ಕಾರಣವಾದ ತಕ್ಷಣವೇ ಸುತ್ತೋಲೆಯನ್ನು ವಾಪಸ್ ತೆಗೆದುಕೊಂಡು ಪರಿಷ್ಕರಣೆ ಮಾಡಿ ಹೊಸ ಸುತ್ತೋಲೆ ಹೊರಡಿಸಲಾಗಿದೆ.

ಮೊದಲು ಶಾಲೆಗಳಿಗೆ ಕಳುಹಿಸಿದ್ದ ಸುತ್ತೋಲೆಯಲ್ಲಿ ಶಾಲೆಗಳ ಬಾತ್ ರೂಂ, ವಾಷ್ ರೂಂ ಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ನಮೂದಿಸಲಾಗಿತ್ತು, ಇದು ವಿವಾದಕ್ಕೆ ಎಡೆ ಮಾಡಿಕೊಟ್ಟ ತಕ್ಷಣವೇ ಸುತ್ತೋಲೆಯನ್ನು ವಾಪಸ್ ಪಡೆದುಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‍ ಕುಮಾರ್ ತಿಳಿಸಿದ್ದಾರೆ.

ಕೆ.ಪಿ.ಅಗ್ರಹಾರ ಪೊಲೀಸರ ಕಣ್ತಪ್ಪಿನಿಂದ ಸುತ್ತೋಲೆಯಲ್ಲಿ ಶಾಲೆಗಳ ಬಾತ್ ರೂಂ, ವಾಷ್ ರೂಂ ಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಸೇರಿಕೊಂಡಿದ್ದು, ತಕ್ಷಣವೇ ಅದನ್ನು ಹಿಂತೆಗೆದುಕೊಂಡು ಹೊಸ ಸುತ್ತೋಲೆ ಕಳುಹಿಸಲಾಗಿದೆ ಎಂದು ಹೇಳಿದರು.

ಶಾಲೆಗಳ ಆವರಣ,ಮೈದಾನ,ಕಾರಿಡಾರ್‍ ಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಕ್ಯಾಮಾರ ಅಳವಡಿಸಿ ಡಿವಿಆರ್‍ ನಲ್ಲಿ ರೆಕಾರ್ಡ್ ಆಗಬೇಕು ಅದರಲ್ಲಿ 6 ತಿಂಗಳವರೆಗೆ ದೃಶ್ಯಾವಳಿಗಳು ಶೇಖರಣೆಯಾಗುವಂತಿರಬೇಕು ಎಂದು ಶಾಲೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆ ಎಂದರು.

ಕೆಪಿ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಆಗಸ್ಟ್ 30ರ ರಾತ್ರಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿತ್ತು. 8 ವರ್ಷದ ಬಾಲಕಿಯ ಮೇಲೆ 13 ವರ್ಷದ ಬಾಲಕ ಬಾತ್ ರೂಮ್‍ ನಲ್ಲಿ ಅತ್ಯಾಚಾರ ನಡೆಸಿದ್ದ. ಹುಡುಗಿಯ ಮೇಲೆ ದೌರ್ಜನ್ಯ ನಡೆಯುವಾಗ ಹೊರಗಡೆ ಮತ್ತೊಬ್ಬ ಬಲಕನೊಬ್ಬ ಕಾವಲು ಕಾಯುತ್ತಿದ್ದನು. ಹೀಗಾಗಿ ಎಲ್ಲಾ ಶಾಲೆಯ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದ ಪೊಲೀಸರು ಶಾಲೆಯಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ