ಲಾರಿ ಡಿಕ್ಕಿ ವ್ಯಕ್ತಿ ಸಾವು !

Kannada News

14-09-2017

ಬೆಂಗಳೂರು: ಹೆಬ್ಬಾಳದ ದೇವಿನಗರ ಕ್ರಾಸ್ ಬಳಿ ಗುರುವಾರ ನಸುಕಿನಲ್ಲಿ ಲಾರಿಯ ಹಿಂಬದಿಗೆ ಬಂದು, ಬಗ್ಗಿ ನೋಡುತ್ತಿದ್ದ ಚಾಲಕ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ನಾಗಾಲ್ಯಾಂಡ್ ಮೂಲದ ಲಾರಿ ಚಾಲಕ ಅಜಯ್‍ಕುಮಾರ್ (25)ಎಂದು ಗುರುತಿಸಲಾಗಿದೆ. ಅಪಘಾತವುಂಟು ಮಾಡಿದ ಮತ್ತೊಂದು ಲಾರಿ ಚಾಲಕ ಶಿವಾನಂದರನ್ನು ಹೆಬ್ಬಾಳ ಸಂಚಾರ ಪೊಲೀಸರು ಬಂಧಿಸಿದ್ದಾರೆ.

ಮೆಟ್ರೋ ರೈಲು ಬೋಗಿಗಳನ್ನು ಲಾರಿಯಲ್ಲಿ ತುಂಬಿಕೊಂಡು ಮುಂಜಾನೆ 3.30ರ ವೇಳೆ ಯಶವಂತಪುರದ ಕಡೆಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ದೇವಿನಗರ ಕ್ರಾಸ್ ನ ಕೆಳಸೇತುವೆ ಬಳಿ ಏಕಾಏಕಿ ಲಾರಿ ಅಲುಗಾಡಿದೆ. ಲಾರಿ ನಿಲ್ಲಿಸಿ ಹಿಂದೆ ಬಂದು ಬೋಗಿಗಳನ್ನಾದರು ಅಲುಗಾಡಿವೆಯಾ ಎಂದು ಚಾಲಕ ಅಜಯ್‍ಕುಮಾರ್ ನೋಡುತ್ತಿದ್ದಾಗ ಅದೇ ಮಾರ್ಗವಾಗಿ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ