ಕಟ್ಟಿಗೆ ಗೂಡಿಗೆ ಬೆಂಕಿ: ವ್ಯಕ್ತಿ ಆತ್ಮಹತ್ಯೆ !

Kannada News

14-09-2017

ಬೆಂಗಳೂರು: ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದು ಮಾನಸಿಕ ಖಿನ್ನತೆಗೊಳಗಾಗಿದ್ದ, ನರೇಗಾ ಎಂಜಿನಿಯರೊಬ್ಬರು ಕಟ್ಟಿಗೆ ಗೂಡಿಗೆ ಬೆಂಕಿ ಹಚ್ಚಿ ಅದರಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ, ಮನಕಲಕುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ.

ಬಾಗೇಪಲ್ಲಿ ತಾಲೂಕು ಪಂಚಾಯತಿಯಲ್ಲಿ ಗುತ್ತಿಗೆ ಆಧಾರದ ನರೇಗಾ ಎಂಜಿನಿಯರ್ ವಂಗಿಮಾಳ್ಳುವಿನ ಶ್ರೀನಾಥ್ ರೆಡ್ಡಿ ಮೃತಪಟ್ಟವರು. ಕರ್ತವ್ಯದ ವೇಳೆ ಲಂಚ ಕೇಳಿ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದ ಶ್ರೀನಾಥ್ ರೆಡ್ಡಿ ಜೈಲು ಸೇರಿ ಹೊರಬಂದಿದ್ದರು.

ಲಂಚಾವತರದಲ್ಲಿ ತನ್ನದೇನೂ ಪಾತ್ರ ಇಲ್ಲ, ಎಲ್ಲವೂ ಬಾಗೇಪಲ್ಲಿ ತಾಲೂಕಿನ ಕೆಲ ಗ್ರಾಮ ಪಂಚಾಯತ್ ಪಿಡಿಒಗಳ ಷಡ್ಯಂತ್ರ ದಿಂದ ನಡೆದಿದೆ ಎಂದು  ಆತ್ಮಹತ್ಯೆಗೂ ಮುನ್ನ ಬರೆದಿಟ್ಟು  ಶ್ರೀನಾಥ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗ್ರಾಮ ಪಂಚಾಯತಿಯ ಪಿಡಿಒಗಳಾದ ವೆಂಕಟರಮಣಪ್ಪ, ಶ್ರೀನಿವಾಸ್ ಹಾಗೂ ಆಯೂಬ್ ಪಾಷಾ ಎಲ್ಲರೂ ಸೇರಿ ತಾವು ಲಂಚದ ಹಣ ತಿಂದು ತೇಗಿ ಭ್ರಷ್ಟಾಚಾರ ಮಾಡಿ, ತನ್ನನ್ನ ಸಿಕ್ಕಿ ಹಾಕಿಸಿದ್ದರು ಎಂದು ಡೆತ್‍ ನೋಟ್‍ನಲ್ಲಿ ಶ್ರೀನಾಥ್ ಉಲ್ಲೇಖಿಸಿದ್ದಾರೆ.

ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಮೃತ ಶ್ರೀನಾಥ್ ರೆಡ್ಡಿ ತಾಯಿ ಸರೋಜಮ್ಮ ದೂರು ದಾಖಲಿಸಿದ್ದು, ಎಸಿಬಿ ದಾಳಿಗೆ ಒಳಗಾದ ನಂತರ ನನ್ನ ಮಗ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರು ದಾಖಲಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ