ಮೆಡಿಕಲ್ ಸ್ಟೋರ್ ನಲ್ಲಿ ಕಳ್ಳತನ !

Kannada News

14-09-2017

ಬೆಂಗಳೂರು: ಮೆಡಿಕಲ್ ಸ್ಟೋರ್ ನ ಶೆಟರ್ ಮುರಿದ ಕಳ್ಳತನ ಮಾಡಿರುವ ಘಟನೆಯು, ನಗರದ ಮಲ್ಲೇಶ್ವರಂನಲ್ಲಿ ನಡೆದಿದೆ. ಮಲ್ಲೇಶ್ವರಂ ನ 17ನೇ ಅಡ್ಡ ರಸ್ತೆಯಲ್ಲಿರುವ, ಗಣೇಶ್ ಮೆಡಿಕಲ್ಸ್ ನಲ್ಲಿ ಸುಮಾರು 1.5 ಲಕ್ಷ ರೂಪಾಯಿ ದೋಚಿದ್ದಾರೆ. ಅಲ್ಲದೇ ದೇವರ ಹುಂಡಿಯಲ್ಲಿದ್ದ ಹಣವನ್ನೂ ಬಿಡದ ಕಳ್ಳರು ಅದನ್ನೂ ಲಪಟಾಯಿಸಿದ್ದಾರೆ. ಮೆಡಿಕಲ್ ಸ್ಟೋರ್ ನಲ್ಲಿ ಸಿಸಿಟಿವಿ ಕ್ಯಾಮರಾ ಇದ್ದರೂ ಚಾಲನೆಯಲ್ಲಿರಲಿಲ್ಲ, ಆದ್ದರಿಂದ ದೃಶ್ಯಗಳು ಸರೆಯಾಗದಿದ್ದು, ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮಲ್ಲೇಶ್ವರಂ ಪೊಲೀಸರ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.                       ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ