ಎಟಿಎಂ: ಹಣದರೋಡೆಗೆ ವಿಫಲ ಯತ್ನ !

Kannada News

14-09-2017

ಕೊಪ್ಪಳ: ಎಟಿಎಂ ನಲ್ಲಿ ಹಣ ಕಳ್ಳತನಕ್ಕೆ ಯತ್ನಿಸಿರುವ ಘಟನೆಯು, ಕೊಪ್ಪಳ ತಾಲ್ಲೂಕಿನ ಇರಕಲ್ ಗಡ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪ್ರಗತಿ ಗ್ರಾಮೀಣ ಬ್ಯಾಂಕಿನ ಎ.ಟಿ.ಎಮ್.ನಲ್ಲಿ ಹಣ ದೋಚಲು ದುಷ್ಕರ್ಮಿಗಳು ಯತ್ನಿಸಿದ್ದು, ಪ್ರಯತ್ನ ವಿಫಲವಾಗಿದೆ. ಎ.ಟಿ.ಎಮ್ ನಲ್ಲಿ ಒಟ್ಟು 70000 ಸಾವಿರ ಹಣ ಸಂಗ್ರಹವಿತ್ತು ಎಂದು ಹೇಳಲಾಗುತ್ತಿದ್ದು, ಮಶೀನ್ ನಿಂದ ಹಣ ಕಳ್ಳತನವಾಗಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳಿಂದ ಮಾಹಿತಿ ನೀಡಿದ್ದಾರೆ. ಇನ್ನು ಎಟಿಎಂ ನ ಮುಂಭಾಗ ಒಡೆದಿರುವ ದುಷ್ಕರ್ಮಿಗಳು ಅದನ್ನು ಹಾಗೆ ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸರು ಭೇಟಿ ನೀಡಿದ್ದು,  ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು, ಹಣ ದೋಚಲು ಯತ್ನಿಸಿದ ದುಷ್ಕರ್ಮಿಗಳಿಗಾಗಿ ಶೋಧ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ