ಪಾರ್ಕ್ ಗೆ ನುಗ್ಗಿದ ಟಿಟಿ ವಾಹನ !

Kannada News

14-09-2017

ಮೈಸೂರು: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು, ಚಾಲಕನ ನಿಯಂತ್ರಣ ತಪ್ಪಿದ ಟಿಟಿ ವಾಹನ, ಉದ್ಯಾನವನದ ಗೋಡೆಗೆ ಢಿಕ್ಕಿ ಹೊಡೆದು, ಉದ್ಯಾನವನದ ಒಳಗೆ ನುಗ್ಗಿದೆ. ಘಟನೆಯು, ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆ ಹಾಗೂ ಚಾಮರಾಜ ಜೋಡಿ ರಸ್ತೆಗೆ ಹೊಂದಿಕೊಂಡಿರುವ, ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಉದ್ಯಾನವನದ ಬಳಿ ನಡೆದಿದೆ.  ಅಪಘಾತದಲ್ಲಿ ಬೈಕ್ ನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇನ್ನು ಉದ್ಯಾನವನದ ಗೋಡೆ ಹಾಳಾಗಿದ್ದು, ಟಿಟಿ ಚಾಲಕ, ಮತ್ತು ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿನ್ನೆ ತಡರಾತ್ರಿ, ಕೃಷ್ಣರಾಜ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನೆಡೆದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ