ಮೇಲ್ದರ್ಜೆ ವಿಮಾನ ನಿಲ್ದಾಣ: ಇಂದು ಲೋಕಾರ್ಪಣೆ

Kannada News

14-09-2017

ಬೆಳಗಾವಿ: ಮೇಲ್ದರ್ಜೆಗೇರಿದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ಇಂದು ಲೋಕಾರ್ಪಣೆಗೆ ಸಿದ್ದವಾಗಿದ್ದು, ಮದ್ಯಾಹ್ನ 1 ಗಂಟೆಗೆ, ಸಿಎಂ ಸಿದ್ದರಾಮಯ್ಯ, ಕೇಂದ್ರ ವಿಮಾನಯಾನ ಸಚಿವ ಅಶೋಕ ಗಜಪತಿ ರಾಜು ಸೇರಿ, ಅನೇಕ ಗಣ್ಯರು ಭಾಗಿಯಾಗಲಿದ್ದಾರೆ. ಬೆಳಗಾವಿಯ ಈ ಸಾಂಬ್ರಾ ವಿಮಾನ ನಿಲ್ದಾಣ, ಸಿ ಕೆಡರ್ ಮಾನ್ಯತೆ ಪಡೆದಿದ್ದು, ಪ್ರತಿ ಗಂಟೆಗೆ 40-50 ವಿಮಾನ ಹಾರಾಟದ ಸಾಮರ್ಥ್ಯ ಹೊಂದಿದೆ. 141.80 ಕೋಟಿ ವೆಚ್ಚದಲ್ಲಿ 370 ಎಕರೆ ಪ್ರದೇಶದಲ್ಲಿನ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿಲಾಗಿದೆ. ರನ್ ವೇ, ಟ್ಯಾಕ್ಸಿ ವೇ, ತುರ್ತು ಅವಶ್ಯಕತೆಗಾಗಿ ಪ್ರಯಾಣಿಕರು ತಂಗುವ ಎಫ್ರಾನ್ ಲಭ್ಯತೆ ಇದೆ. ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಕ್ಕೆ ಸಂಪರ್ಕ ಇನ್ನೂ ಮತ್ತಷ್ಟು ಸುಲಭವಾಗಲಿದ್ದು, ಸ್ಮಾರ್ಟ್ ಸಿಟಿ ಬೆಳಗಾವಿ ವಿಮಾನ ಪ್ರಯಾಣ ಇನ್ನೂ ಮತ್ತಷ್ಟು ಸುಲಭವಾಗಲಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ