ಮನೆಗೆ ನುಗ್ಗಿ ಹೆದರಿಸಿ ದರೋಡೆ !

Kannada News

13-09-2017

ಬೆಂಗಳೂರು: ಹಾಡುಹಗಲೇ ಗಿರಿನಗರದ ಬಿ.ಎಸ್‍.ಕೆ 3ನೇ ಹಂತದಲ್ಲಿ ವಾಸಿಸುತ್ತಿದ್ದ, ನಿವೃತ್ತ ಲೆಕ್ಕಾಧಿಕಾರಿ ದಂಪತಿಯ ಮನೆಗೆ ನುಗ್ಗಿ ಬೆದರಿಸಿ ಮೊಬೈಲ್, ಚಿನ್ನಾಭರಣಗಳನ್ನು ಇಬ್ಬರು ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದಾರೆ.

ಬಿ.ಎಸ್‍.ಕೆ 3ನೇ ಹಂತದ 3ನೇ ಬ್ಲಾಕ್‍ ನ ವಾಟರ್ ಟ್ಯಾಂಕ್ ಬಳಿ ವಾಸಿಸುತ್ತಿದ್ದ ನಿವೃತ್ತ ಲೆಕ್ಕಾಧಿಕಾರಿ ರಘು (63) ಹಾಗೂ ಅವರ ಪತ್ನಿ ಭಾನುಮತಿ ಅವರು ಮಂಗಳವಾರ  ಮಧ್ಯಾಹ್ನ 12ರ ವೇಳೆ ಬಾಗಿಲು ತೆಗೆದುಕೊಂಡು ಮಾತನಾಡುತ್ತ ಕುಳಿತಿದ್ದರು. ಈ ವೇಳೆ ಏಕಾಏಕಿ ಮನೆಯೊಳಗೆ ನುಗ್ಗಿ ಬಂದ ಇಬ್ಬರು ದುಷ್ಕರ್ಮಿಗಳು ದಂಪತಿಯನ್ನು ಚಾಕು ತೋರಿಸಿ ಬೆದರಿಸಿ ಭಾನುಮತಿ ಅವರ ಕೈಯಲ್ಲಿದ್ದ 2 ಬಳೆ, ಮಾಂಗಲ್ಯ ಸರ ಕಸಿದು ಮೊಬೈಲ್ ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ಗಿರಿನಗರ ಪೊಲೀಸರು ದುಷ್ಕರ್ಮಿಗಳಿಗಾಗಿ ಶೋಧ ನಡೆಸಿದ್ದಾರೆಂದು ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ