ಕೊಲೆ ಮಾಡಿ: ಸುಳ್ಳು ಹೇಳಿ ಸಿಕ್ಕಿಬಿದ್ದರು !

Kannada News

13-09-2017 192

ಬೆಂಗಳೂರು: ಕೊಲೆ ಮಾಡಿ ಶಿಕ್ಷೆಯಿಂದ ಪಾರಾಗಲು ಪೊಲೀಸರಿಗೆ ಸುಳ್ಳಿನ ಕತೆ ಹೇಳಿ ಕೊನೆಗೆ ಆರೋಪಿಯೇ ತಪ್ಪೊಪ್ಪಿಕೊಂಡ ಘಟನೆಯು, ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ವಾಪ್ತಿಯಲ್ಲಿ ನಡೆದಿದೆ.

ತಟ್ಟನಹಳ್ಳಿ ಗ್ರಾಮದಲ್ಲಿ ಆವಡದೇನಹಳ್ಳಿ ಮನೋಜ್ (19)ನನ್ನು ತಟ್ಟನಹಳ್ಳಿ ಯಶವಂತ್ (19) ಮತ್ತು ಮರಸೂರು ವಿಜಯ್ (18)ಸೇರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಮಾಡಿದ ಕೊಲೆಯಿಂದ ಪಾರಾಗಲು ಮನೋಜ್ ನನ್ನು ಚಾಕುವಿನಿಂದ ಇರಿದು ಕೊಲೆಗೈಯಲು ಯತ್ನಿಸಿದಾಗ ಆತ್ಮರಕ್ಷಣೆ ಮಾಡಿಕೊಳ್ಳಲು ಮನೋಜ್‍ ನನ್ನು ಅದೇ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ ಎಂದು ಪೊಲೀಸರಿಗೆ ಸುಳ್ಳಿನ ಕತೆ ಕಟ್ಟಿ ಶಿಕ್ಷೆಯಿಂದ ಪಾರಾಗಲು ಮುಂದಾಗಿದ್ದ ಎನ್ನಲಾಗಿದೆ.

ಮನೋಜ್ ಶವವನ್ನು ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ಮನೋಜ್‍ ನನ್ನು 14 ಬಾರಿ ಇರಿದು ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆ ಎಂದು ವೈದ್ಯರು ವರದಿ ನೀಡಿದ್ದಾರೆ. ವರದಿ ಮೇಲೆ ತನಿಖೆ ಮಾಡಿದ ಅತ್ತಿಬೆಲೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಎಲ್.ವೈ. ರಾಜೇಶ್ ಹಾಗೂ ಉಪ ನಿರೀಕ್ಷಕ ಗಜೇಂದ್ರ ಹಾಗೂ ಅವರ ತಂಡ, ಆರೋಪಿ ಯಶವಂತ್‍ ನಿಗೆ ಪೊಲೀಸ್ ರುಚಿ ತೋರಿಸಿದ ಮೇಲೆ ಮನೋಜ್‍ ನನ್ನು ನಾನು ಮತ್ತು ನನ್ನ ಸ್ನೇಹಿತ ವಿಜಯ್ ಕೊಲೆ ಮಾಡಿದ್ದೇವೆ. ಜೊತೆಗೆ ತನ್ನ ಹೊಟ್ಟೆಯನ್ನು ತಾನೇ ಸ್ವಯಂ ಕುಯ್ದುಕೊಂಡಿದ್ದಾಗಿ ಆರೋಪಿ ಯಶವಂತ್ ಪೊಲೀಸರಿಗೆ ಹೇಳಿದ್ದಾನೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ