ಕೊಕೇನ್ ಮಾರಾಟ: ನೈಜೀರಿಯನ್ನರ ಬಂಧನ !

Kannada News

13-09-2017

ಬೆಂಗಳೂರು: ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನೆಲೆಸಿ, ಕೊಕೇನ್ ಮಾರಾಟ ಮಾಡುತ್ತಿದ್ದ ಮೂವರು ನೈಜೀರಿಯನ್ನರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 3 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. ನೈಜೀರಿಯಾದ ಲಾಗೋಸ್‍ ನ ಅಮಿಯಾಚಿ ಒಕಾಪೋರ್(29) ಅನ್ಬೇರಾದ ಕೆನ್ನೆಕ್ ನ್ವಾಬುನ್‍ ವಾನೆ(25) ಹಾಗೂ ವಿಕ್ಟರ್ ಚಿನ್‍ ವೆಬಾ(25) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ 8 ಗ್ರಾಂ ಕೊಕೇನ್ ,6 ಮೊಬೈಲ್‍ ಗಳು,2 ಬೈಕ್‍ ಗಳು,2 ಸಾವಿರ ನಗದು ಸೇರಿ 3 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಆರೋಪಿಗಳು ರಾಮಮೂರ್ತಿನಗರದ ಗಾರ್ಡನ್ ಸ್ಟ್ರೀಟ್ ಎಕ್ಸ್‍ ಟೆನ್ಷನ್‍ ನಲ್ಲಿ ಬಾಡಿಗೆ ಮನೆ ಮಾಡಿಕೊಂಡು, ವೀಸಾ ನಿಯಮ ಉಲ್ಲಂಘಿಸಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದರು.

ಈಗಾಗಲೇ ಬಂಧಿತರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಬಂಧಿತರಾಗಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿರುವುದನ್ನು ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ ಎಂದು, ಜಂಟಿ ಪೊಲೀಸ್ ಆಯುಕ್ತ ಸತೀಶ್‍ ಕುಮಾರ್ ತಿಳಿಸಿದ್ದಾರೆ. ಆರೋಪಿಗಳು ನಗರದ ವಿವಿದೆಢೆ ಬೈಕ್‍ ಗಳಲ್ಲಿ ಸುತ್ತಾಡುತ್ತಾ ಕೋಕೇನ್ ಮಾರಾಟ ಮಾಡುತ್ತಿದ್ದು ಖಚಿತ ಮಾಹಿತಿ ಮೇಲೆ ಬಂಧಿಸಿ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ