ಬೆದರಿಕೆ ಹಾಕಿರುವುದು ರವಿ ಪೂಜಾರಿ ಅಲ್ಲ

Kannada News

13-09-2017

ಬೆಂಗಳೂರು: ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಸಹೋದರ ಸಂಸದ ಡಿಕೆ ಸುರೇಶ್ ಅವರಿಗೆ, ಹಣಕ್ಕಾಗಿ ಭೂಗತ ಪಾತಕಿ ರವಿ ಪೂಜಾರಿ ಫೋನ್ ಮಾಡಿ ಡಿಕೆ ಸುರೇಶ್ ಅವರಿಗೆ ಬೆದರಿಕೆ ಹಾಕಿರುವ ಪ್ರಕರಣ ತನಿಖೆ ನಡೆಸಿರುವ ಪೊಲೀಸರಿಗೆ, ಬೆದರಿಕೆ ಹಾಕಿರುವುದು ರವಿಯ ಬಂಟ ಎನ್ನುವುದು ಪತ್ತೆಯಾಗಿದೆ. ಶಿವಕುಮಾರ್ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸುವ ವೇಳೆ ಸುರೇಶ್ ಅವರಿಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದು ರವಿ ಪೂಜಾರಿ ಅಲ್ಲ, ಮಂಗಳೂರು ಮೂಲದ ದುಷ್ಕರ್ಮಿ ಎನ್ನುವುದು ತನಿಖೆಯಲ್ಲಿ ಕಂಡುಬಂದಿದೆ.

ರವಿ ಪೂಜಾರಿಯ 50ಕ್ಕೂ ಹೆಚ್ಚು ಬಂಟರಲ್ಲಿ ಮಂಗಳೂರಿನ ದುಷ್ಕರ್ಮಿಯೊಬ್ಬ ಸುರೇಶ್ ಅವರಿಗೆ ಕರೆ ಮಾಡಿ. ಬೆದರಿಕೆ ಹಾಕಿದ್ದಾನೆ. ಡಿ.ಕೆ.ಸುರೇಶ್ ಅವರ ಚಾಲಕನಿಗೆ ರವಿ ಪೂಜಾರಿ ಬೆದರಿಕೆ ಹಾಕಿಲ್ಲವೆಂದು ಸಿಸಿಬಿ ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಫೋನ್ ಮಾಡಿದ ವ್ಯಕ್ತಿಯೂ ಸಹ ಸದ್ಯ ಭೂಗತವಾಗಿದ್ದಾನೆ. ಆತ ರವಿ ಪೂಜಾರಿಯ ಜೊತೆ ಇನ್ನೂ ಸಂಪರ್ಕ ಹೊಂದಿದ್ದಾನಾ ಎಂಬ ಶಂಕೆ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ