ಕುಡಿದು ಆಂಬ್ಯುಲೆನ್ಸ್: ಚಲಾಯಿಸುತ್ತಿದ್ದ ಭೂಪ !

Kannada News

13-09-2017

ಬೆಂಗಳೂರು: ಪಾನಮತ್ತನಾಗಿ ವಾಹನ ಚಲಾಯಿಸುವ ಚಾಲಕರ ವಿರುದ್ಧ ಕಾರ್ಯಾಚರಣೆ ನಡೆಸಿದ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು, ಕುಡಿದು  ಆಂಬ್ಯುಲೆನ್ಸ್ ವಾಹನ ಚಲಾಯಿಸುತ್ತಿದ್ದ ಚಾಲಕನನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದಾರೆ.

ಆಂಬ್ಯುಲೆನ್ಸ್ ಚಾಲಕನಾಗಿದ್ದ ರುದ್ರೇಶಪ್ಪ ಮೇಲೆ ಪ್ರಕರಣ ದಾಖಲಿಸಿ ಆತನ ವಾಹನ ಚಾಲನಾ ಪರವಾನಗಿ ಪತ್ರವನ್ನು ವಶಪಡಿಸಿಕೊಳ್ಳಲಾಗಿದೆ. ರುದ್ರೇಶಪ್ಪ  ಸುಂಕದಕಟ್ಟೆಯಿಂದ ಕೆ.ಹೆಚ್‍.ಬಿ ಜಂಕ್ಷನ್‍ನ 108 ಆಂಬ್ಯುಲೆನ್ಸ್ ಕಚೇರಿಗೆ ಕಂಠಪೂರ್ತಿ ಕುಡಿದು ಅಂಬುಲೆನ್ಸ್ ಚಲಾಯಿಸಿಕೊಂಡು ಸುಮ್ಮನಹಳ್ಳಿ ಜಂಕ್ಷನ್ ಬಳಿ ಬರುತ್ತಿದ್ದಾಗ ಕಾರ್ಯಾಚರಣೆ ನಡೆಸಿ ರುದ್ರೇಶಪ್ಪನನ್ನು ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ತಡೆದು ತಪಾಸಣೆ ನಡೆಸಿದಾಗ ಆತ ಮದ್ಯಪಾನ ಮಾಡಿರುವುದು ಪತ್ತೆಯಾಗಿದೆ. 108 ಆಂಬ್ಯುಲೆನ್ಸ್‍ ಅನ್ನು ಜಪ್ತಿ ಮಾಡಿ, ಚಾಲಕ ರುದ್ರೇಶಪ್ಪನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ