ಸಿಎಂ ಸೌಜನ್ಯ ಕಳೆದುಕೊಂಡಿದ್ದಾರೆ..?

Kannada News

13-09-2017

ಬೆಂಗಳೂರು: ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ವಿಧಾನ ಷರಿಷತ್ತು ಶಿಕ್ಷಕ ವಲಯವನ್ನು ಪ್ರತಿನಿಧಿಸುವ ಸದಸ್ಯರುಗಳು ನಡೆಸುತ್ತಿರುವ ಆಹೋ ರಾತ್ರಿ ಪ್ರತಿಭಟನಾ ಧರಣಿ  8ನೇ ದಿನಕ್ಕೆ ಕಾಲಿಟ್ಟಿದೆ. ಇನ್ನು ಧರಣಿ ಸ್ಥಳಕ್ಕೆ ಮಾಜಿ ಪ್ರಧಾನಿ ಎಚ್ ಡಿ. ದೇವೇಗೌಡರ ಭೇಟಿ. ವಿಧಾನಸೌಧ ಬಳಿ ಇರುವ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ಶಿಕ್ಷಕರ ಬೇಡಿಕೆಗೆ ಸ್ಪಂದಿಸುವಂತೆ ಆಗ್ರಹಿಸಿದರು. ಈ ವೇಳೆ ಮಾತನಾಡಿದ ಅವರು,  ಕಳೆದ ಒಂದು‌ವರ್ಷದಿಂದ ಸದನದ ಒಳಗೆ ,ಹೊರಗೆ ಪಕ್ಷಾತೀತವಾಗಿ ಎಂ.ಎಲ್.ಸಿಗಳು ಹೋರಾಟ ಮಾಡ್ತಿದ್ದಾರೆ, ಆದರೆ ಸರ್ಕಾರದಿಂದ ಯಾವುದೇ ಪ್ರಯೋಜನ ಆಗಿಲ್ಲ ಎಂದು ಮಾಜಿಪ್ರಧಾನಿ ಹೆಚ್.ಡಿ ದೇವೆಗೌಡರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ವಿಧಾನ ಸೌಧದಲ್ಲೆ ಧರಣಿ ಮಾಡ್ತಿದ್ರು ಯಾವ ಸಚಿವರು ಬಂದಿಲ್ಲ, ಇದು ಸರ್ಕಾರಕ್ಕೆ ಶೋಭೆ ತರೋದಲ್ಲ ಎಂದರು.

ಶೈಕ್ಷಣಿಕ ಸಮಸ್ಯೆಗಳಿಗೆ ಅಂತಿಮ ಪರಿಹಾರ ಆಗಬೇಕು ಅನ್ನೋದು ಇವರ ಹೋರಾಟ. 80% ಬೇಡಿಕೆಗೆ ಸರ್ಕಾರಕ್ಕೆ ಯಾವುದೇ ಹೊರೆ ಬಿಳೋದಿಲ್ಲ. ಆದ್ರೆ ಸಿಎಂ ಯಾಕೆ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲವೋ ಗೊತ್ತಿಲ್ಲ. ಸರ್ಕಾರ ಯಾಕೆ ಇಷ್ಡು ಕಠೋರ ನಿರ್ಧಾರ ತೆಗೆದುಕೊಂಡಿದೆಯೋ ಗೊತ್ತಿಲ್ಲ. 15 ರಂದು ಸಭೆ ಕರೆದಿದ್ದೇನೆ. ಅಲ್ಲಿಗೆ ಅವ್ರು ಬರಲಿ ಅನ್ನೊ‌ ಹಠ ಸಿಎಂಗೆ ಇರಬಹುದು. ಇದು ಸಿಎಂ ಹಾಗೂ ಸರ್ಕಾರಕ್ಕೆ  ಶೋಭೆ ತರಲ್ಲ ಎಂದಿದ್ದಾರೆ. 15 ತಾರೀಖಿನ ಸಭೆಯಲ್ಲಿ ಎಲ್ಲಾ ಸಮಸ್ಯೆ ಪರಿಹಾರ ಮಾಡಬೇಕು, ಸಿಎಂ ಸೌಜನ್ಯ ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ