ಗಾಂಜಾ ಸೇವನೆ: 6 ಮಂದಿ ಬಂಧನ !

Kannada News

13-09-2017

ಉಡುಪಿ: ಗಾಂಜಾ ಸೇವನೆ ಮಾಡುತ್ತಿದ್ದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಡುಪಿಯ ಮಣಿಪಾಲ ಪೊಲೀಸರು ಕಾರ್ಯಾಚರಣೆ ನಡೆಸಿ, ಮಣಿಪಾಲದ ಎಂಐಟಿಯ ಐವರು ವಿದ್ಯಾರ್ಥಿಗಳು, ಮಲೇಷಿಯಾ ಮೂಲದ ಯುವತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರಲ್ಲಿ ಆರು ಮಂದಿ ಗಾಂಜಾ ವ್ಯಸನಿಗಳ ವೈದ್ಯಕೀಯ ತಪಾಸಣೆ ನಡೆಸಿ, ಡ್ರಗ್ಸ್ ಸೇವಿಸಿರುವುದನ್ನು, ವೈದ್ಯರು ಸಾಬೀತು ಪಡಿಸಿದ್ದಾರೆ. ಮಾದಕ ವಸ್ತುಗಳ ಸೇವನೆ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿತ್ತು, ಉಡುಪಿ ಎಸ್ಪಿ ಡಾ. ಸಂಜೀವ ಪಾಟೀಲ್ ನೇತೃತ್ವದಲ್ಲಿ  ಮಣಿಪಾಲ ಪೊಲೀಸರ ಕಾರ್ಯಾಚರಣೆ ನಡೆಸಿ ಇವರನ್ನು ಬಂಧಿಸಲಾಗಿತ್ತು, ಮತ್ತು ಮಾದಕ ವಸ್ತುಗಳ ಸಾಗಣೆ ಮಾಡುವವರ ವಿರುದ್ಧವು ಕ್ರಮ ಕೈಗೊಂಡು, ಎಲ್ಲಿಂದ ಮಾದಕ ವಸ್ತುಗಳು ಪೂರೈಕೆ ಆಗುತ್ತಿದೆ ಎಂಬ ಬಗ್ಗೆಯೂ ಪತ್ತೆ ಹಚ್ಚುತ್ತೇವೆ ಎಂದು ಉಡುಪಿ ಎಸ್ಪಿ ಡಾ.ಸಂಜೀವ ಪಾಟೀಲ್ ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಉಡುಪಿ ಗಾಂಜಾ ಸೇವನೆ 6 ಮಂದಿ ಬಂಧನ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ