ಶೌಚಾಲಯಕ್ಕಾಗಿ ಉಪವಾಸ !

Kannada News

13-09-2017

ಕೊಪ್ಪಳ: ಶೌಚಾಲಯಕ್ಕಾಗಿ ಉಪವಾಸ ಮಾಡಿ, ಕೊನೆಗೆ ಶೌಚಾಲವನ್ನು ಕಟ್ಟುವವರೆಗೂ, ಛಲ ಬಿಡದೇ ಕಾರ್ಯ ಸಾಧಿಸಿದ ಮೂವರು, ವಿದ್ಯಾರ್ಥಿನಿಯರಿಗೆ ಎಲ್ಲರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಘಟನೆಯು ಕೊಪ್ಪಳ ತಾಲ್ಲೂಕಿನ ಕಾಮನೂರಿನಲ್ಲಿ ನಡೆದಿದೆ. ಗ್ರಾಮದಲ್ಲಿನ ವಿದ್ಯಾರ್ಥಿನಿಯರು, ಶೌಚಾಲಯ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ. ಶೌಚಾಲಯಕ್ಕಾಗಿ ಮೂರು ದಿನಗಳ ಕಾಲ ಉಪವಾಸ ಮಾಡಿದ್ದ, ಕಾಮನೂರಿನ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರಾದ, ವಿದ್ಯಾ ಕುರಿ, ಸಂಗಿತಾ ಸಂಗಟಿ, ಅಕ್ಷತಾ ಹುಳ್ಳಿ ಉಪವಾಸ ಮಾಡಿ ಶೌಚಾಲಯ ಕಟ್ಟಿಸಿಕೊಂಡರು. ಉಪವಾಸ ಕೈಗೊಂಡಾಗಿನಿಂದಲೂ ಶೌಚಾಲಯ ನಿರ್ಮಾಣವಾಗುವವರೆಗೂ ಉಪವಾಸ ಕೈಬಿಡೆ, ಶೌಚಾಲಯ ಕಟ್ಟಿದ ಬಳಿಕ ಉಪವಾಸ ಕೈ ಬಿಟ್ಟರು. ಶೌಚಾಲಯಕ್ಕಾಗಿ ಗಂಗಾವತಿ ತಾಲ್ಲೂಕಿನ ಡಾಣಾಪುರ  ಗ್ರಾಮದ ಮಲ್ಲಮ್ಮ ಉಪವಾಸದಿಂದ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ಳು, ಅದೇ ತರಹ ದೇವರ ಮೇಲೆ ಪ್ರಮಾಣ ಮಾಡಿ ಉಪವಾಸ ಕೈಗೊಂಡಿದ್ದರು. ವಿದ್ಯಾರ್ಥಿನಿಯರ ಈ ಗಟ್ಟಿ ನಿರ್ಧಾರ ಮತ್ತು ತಮ್ಮ ಹಕ್ಕುಗಳಿಗಾಗಿ ಹೋರಾಟಕ್ಕೆ ಜಿಲ್ಲಾ ಪಂಚಾಯತಿ ಸಿಇಒ ವೆಂಕಟರಾಜಾ ಪ್ರಶಂಸೆ ವ್ಯಕ್ತಪಡಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ