ಬಿಜೆಪಿ: ಯಾವುದೇ ಸ್ವಾಮೀಜಿಗೆ ಟಿಕೆಟ್ ಇಲ್ಲ..?

Kannada News

13-09-2017

ಬಾಗಲಕೋಟೆ: ಡಿ.ವೈ.ಎಸ್.ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಿಷ್ಪಕ್ಷಪಾತ ತನಿಖೆ ನೆಡೆಸುವ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಕೆ.ಜಾರ್ಜ್ ರಾಜಿನಾಮೆ ಕೊಡಬೇಕು ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಸಚಿವ ಜಾರ್ಜ್ ಅಪರಾಧಿ ಎಂದು ನಾವು ಹೇಳಿಲ್ಲ, ಆರೋಪ ಅವರ ಮೇಲೆ ಇರೋದ್ರಿಂದ, ಸಿಎಂ ಸಿದ್ಧರಾಮಯ್ಯ ಕ್ಯಾಬಿನೆಟ್ ನಿಂದ ಕಿತ್ತು ಹಾಕಬೇಕು ಎಂದರು. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಭಟನಾ ರ‍್ಯಾಲಿ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ಬಿಜೆಪಿಯಿಂದ ರಾಜ್ಯದ ಯಾವುದೇ ಸ್ವಾಮೀಜಿಗೆ ಟಿಕೆಟ್ ಇಲ್ಲ, ಅಮಿತ್ ಶಾ ಅವರ ಸೂಚನೆಯಂತೆ ಈಗಾಗಲೇ ಒಂದು ಸಮೀಕ್ಷೆ ಪಟ್ಟಿ ಕೈ ಸೇರಿದೆ. ಇನ್ನೂ ಎರಡು ಸಮೀಕ್ಷಾ ಪಟ್ಟಿ ಕೈಸೇರಿದ ಬಳಿಕ, ಬಿಜೆಪಿಯಿಂದ ಜನವರಿ ತಿಂಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.

ವೀರಶೈವ ಲಿಂಗಾಯತ ಮುಖಂಡರಿಗೆ ಸಚಿವಸ್ಥಾನ ನೀಡದ ವಿಚಾರದ ಕುರಿತು ಪ್ರತಿಕ್ರಿಯಿಸಿ, ಸೂಕ್ತ ಸಂದರ್ಭದಲ್ಲಿ ಪ್ರಧಾನಿ‌ ಮೋದಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ಇನ್ನು ಸಿಎಂ ಸಿದ್ದರಾಮಯ್ಯ ಸುಳ್ಳು ಭರವಸೆ ಕೊಡುತ್ತಾ ಹೊರಟಿದ್ದಾರೆ‌. ಓಟ್ ಬ್ಯಾಂಕ್ ಗಾಗಿ ರಾಜ್ಯದ ಜನರನ್ನು ಮರಳು ಮಾಡ್ತಿದ್ದಾರೆ ಎಂದು ಆರೋಪಿಸಿದರು. ಬಾಗಲಕೋಟೆ ಜಿಲ್ಲಾ ಬಿಜೆಪಿ ಮುಖಂಡರಿಂದ ಬಿ.ಎಸ್.ವೈ ಗೆ ಬಾಗಲಕೋಟೆಯಿಂದ ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದು, ಮಾಧ್ಯಮದವರ ಸಲಹೆ‌ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆಂದು ನಗೆ ಚಟಾಕಿ ಹಾರಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ