ಅನುಮತಿ ಇಲ್ಲದೆ ಮರ ಕಡಿದ ಪೊಲೀಸರು..?

Kannada News

13-09-2017

ಮೈಸೂರು: ಕಾನೂನು ರಕ್ಷಣೆ ಮಾಡಬೇಕಾಗಿರುವ ಪೊಲೀಸ್ ಇಲಾಖೆಯಿಂದಲೇ ಕಾನೂನು ಉಲ್ಲಂಘನೆ ಆರೋಪ ಕೇಳಿಬಂದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಅನುಮತಿಯಿಲ್ಲದೇ ಪೋಲಿಸ್ ಇಲಾಖೆಯಿಂದ ಮರಗಳ ಕಟಾವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಅರಣ್ಯ ಅಧಿಕಾರಿಗಳಿಗೆ, ಪರಿಸರವಾದಿಗಳು ದೂರು ನೀಡಿದ್ದಾರೆ.  ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲಿರುವ ಸಿ.ಆರ್.ಗ್ರೌಂಡ್ ನಲ್ಲಿ ಅರಣ್ಯ ಇಲಾಖೆಯ ಅನುಮತಿಯಿಲ್ಲದೇ ಮರಗಳನ್ನು ಕಟಾವು ಮಾಡಿದ್ದು, ಕಟಾವು ಮಾಡಿದ ಮರದ ದಿಮ್ಮಿಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಯನ್ನು ಪರಿಸರವಾದಿಗಳು ಅಡ್ಡಗಟ್ಟಿ ವಿಚಾರಿಸಿದಾಗ, ಈ ವೇಳೆ ಮರಗಳನ್ನು ಅನುಮತಿ ಇಲ್ಲದೆ ಕಟಾವು ಮಾಡಿರುವುದು ತಿಳಿದು ಬಂದಿದೆ. ಈ ಸಂಬಂಧ ಪೋಲಿಸರ ವಿರುದ್ದ, ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ದೂರು ಸಲ್ಲಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ