ಯಡ್ಡಿ ಕನಸನ್ನು ಏನೆಂದು ಹೇಳಬೇಕು..?13-09-2017 134 0

ಬೆಂಗಳೂರು: ಬೆಂಗಳೂರಿನಲ್ಲಿ ಗೃಹ ಕಚೇರಿ ಕೃಷ್ಣದಲ್ಲಿ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ನಿಯೋಗದದಿಂದ ಮುಖ್ಯಮಂತ್ರಿಗಳಿಗೆ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಅಭಿನಂದನೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಪ್ರಧಾನ ಮಂತ್ರಿ ಅಭ್ಯರ್ಥಿಯಾಗುವುದನ್ನು ತಮ್ಮ ಸಹಿತ ಪಕ್ಷದ ಎಲ್ಲಾ ಹಿರಿಯ ನಾಯಕರು ಸ್ವಾಗತಿಸುತ್ತಾರೆ, ರಾಹುಲ್ ಗಾಂಧಿಯವರು ಪ್ರಧಾನ ಮಂತ್ರಿಯಾಗುವುದು ತಿರುಕನ ಕನಸು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೀಡಿದ ಹೇಳಿಕೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಅವರು ಮುಖ್ಯ ಮಂತ್ರಿಯಾಗುವುದಾಗಿ ಕನಸು ಕಾಣುತ್ತಿರುವುದನ್ನು ಏನೆಂದು ಹೇಳಬೇಕು ಎಂದು ಪ್ರಶ್ನಿಸಿದರು. 2012 ಕಾಂಗ್ರೆಸ್ ಪಕ್ಷ ಸೋಲಿಗೆ ಕಾರಣವಾದ ಅಂಶಗಳನ್ನು ಮುಕ್ತವಾಗಿ ಹೇಳಿರುವುದನ್ನು ಎಲ್ಲರೂ ಸ್ಬಾಗತಿಸಬೇಕು ಮುಂದಿನ ಚುನಾವಣೆಯಲ್ಲಿ ಈ ತಪ್ಪು ತಿದ್ದಿಕೊಳ್ಳಲು ಸಹಕಾರಿಯಾಗುತ್ತದೆ. ರಾಹುಲ್ ಗಾಂಧಿ ಅವರನ್ನು ಅಸಮರ್ಥ ಎಂದು ಬಿಂಬಿಸಲು ಬಿಜೆಪಿಯ ದೊಡ್ಡ ತಂಡ ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿದ್ದು, ಆದರೆ ಈ ಕಾರ್ಯದಲ್ಲಿ ಅವರು ವಿಫಲರಾಗಲಿದ್ದಾರೆ ಎಂದರು. ಲಿಂಗಾಯತ, ವೀರಶೈವ ಪ್ರತ್ಯೇಕ ಧರ್ಮದ ವಿಷಯ ಆಯಾ ಸಮುದಾಯದ ಆಂತರಿಕ ವಿಷಯವಾಗಿದಗಿದ್ದು,  ಈ ಕುರಿತು ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ  ರಾಜ್ಯದ 36 ಸಾವಿರಕ್ಕೂ ಅಧಿಕ ಹಿಂದೂ ದೇವಾಲಯಗಳಿಗೆ ಪೂಜಾಸಾಮಗ್ರಿಗಳನ್ನು ಖರೀದಿಸಲು ವರ್ಷಕ್ಕೆ 48 ಸಾವಿರ ರೂಪಾಯಿಗೆ ಹೆಚ್ಚಸಿರುವುದರಿಂದ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು ಎಂದರು.

Links :

ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ