ಭೀಕರ ರಸ್ತೆ ಅಪಘಾತ 10 ಮಂದಿ ಸಾವು !

Kannada News

13-09-2017

ಉತ್ತರ ಕನ್ನಡ: ಬುಲೇರೋ ಹಾಗೂ ಲಾರಿ ನಡುವೆ ಬೀಕರ ರಸ್ತೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ನಾಲ್ಕು ಮಕ್ಕಳು ಸೇರಿದಂತೆ ಹತ್ತು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಅರಬೈಲ್ ಬಳಿ ಈ ದುರ್ಘಟನೆ ನಡೆದಿದೆ. ಯಲ್ಲಾಪುರದಿಂದ ಅಂಕೋಲ ಕಡೆಗೆ ಬರುತಿದ್ದ ಬುಲೇರೋ ವಾಹನ, ಅಂಕೋಲದಿಂದ ಯಲ್ಲಾಪುರಕ್ಕೆ ಹೋಗುತಿದ್ದ ಲಾರಿ ನಡುವೆ ಅಪಘಾತವಾಗಿದೆ. ಎರಡೂ ವಾಹನಗಳು ಅತಿ ವೇಗವಾಗಿ ಬರುತ್ತಿದ್ದು, ನಿಯಂತ್ರಣ ಸಿಗದೆ ಅಪಘಾತವಾಗಿದೆ ಎನ್ನಲಾಗಿದೆ. ಯಲ್ಲಾಪುರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ