ಸರ್ಕಾರ-ಸಚಿವರ: ಹಗರಣ ಬಯಲಿಗೆಳೆಯುತ್ತೇನೆ..?

Kannada News

13-09-2017

ಬಾಗಲಕೋಟೆ: ರಾಜ್ಯ ಸಕಾ೯ರದ ಭ್ರಷ್ಟಾಚಾರ ಹಗರಣಗಳ ಚಾಜ್೯ಶೀಟ್ ಬಿಡುಗಡೆ ಮಾಡಲು ತೀಮಾ೯ನಿಸಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಬಾಗಲಕೋಟೆಯಲ್ಲಿಂದು ಮಾತನಾಡಿದ ಅವರು, ನಾಲ್ಕೈದು ದಿನದಲ್ಲಿ ಚಾಜ೯ಶೀಟ್ ಬಿಡುಗಡೆ ಮಾಡುತ್ತೇನೆ. ಸಿಎಂ ಸಿದ್ದರಾಮಯ್ಯ ಸೇರಿ ಅವರ ಸಂಬಂಧಿಗಳು ಮತ್ತು ಈ ಸಕಾ೯ರದ ಸಚಿವರು, ಶಾಸಕರುಗಳ ಹಗರಣ ಬಯಲಿಗೆಳೆಯಲು ನಿಧ೯ರಿಸಿದ್ದೇನೆ. ಈ ಬಗ್ಗೆ ರಾಜ್ಯಪಾಲರಿಗೂ ದೂರು ನೀಡಲು ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ.

ಇನ್ನು ಎಂ.ಬಿ. ಪಾಟೀಲ ಕೂಡಲಸಂಗಮದಲ್ಲಿ ದ್ಯಾನ ಕುಳಿತಿದ್ದು ಪ್ರಾಯಶ್ಚಿತಕ್ಕಾಗಿ. ಪಾಟೀಲರಿಗೆ ವಿನಾಶ ಕಾಲೇ ವಿಪರೀತ ಬುದ್ದಿ ಬಂದಂತಾಗಿದೆ. ಸಿದ್ದಗಂಗಾ ಶ್ರೀಗಳ ಹೆಸರು ಪ್ರಸ್ತಾಪಿಸದೆ ಮೌನಾವಾಗಿರೋದು ಒಳ್ಳೆಯದು ಎಂದು ಕಿವಿಮಾತು ಹೇಳಿದ್ದಾರೆ. ಅಖಿಲ ಭಾರತ ವೀರಶೈವ ಸಭಾದಂತೆ ನಡೆಯೋದಾಗಿ ಮೊದಲೇ ಹೇಳಿದ್ದೇವೆ. ಆದರೆ ವಿಷಯ ರಾಜಕೀಕರಣಗೊಳಿಸೋದು ಸರಿಯಲ್ಲ ಎಂದರು.

ರಾಹುಲ್ ನಾನೇ ಮುಂದಿನ ಪ್ರಧಾನಿ ಅಭ್ಯಥಿ೯ ಹೇಳಿಕೆಗೆ ಸಂಬಂಧಿಸಿದಂತೆ, ತಲೆಕೆಟ್ಟವರು ಮಾತನಾಡೋದು ಹೀಗೆಯೇ ಎಂದು ರಾಹುಲ್ ಕುರಿತು ವ್ಯಂಗ್ಯವಾಡಿದ್ದಾರೆ. ರಾಹುಲ್ ಗಾಂಧಿಯದ್ದು ತಿರುಕನ‌ ಕನಸು. ಇವರಿಗೆ ಕಾಮನಸೆನ್ಸ್ ಇಲ್ಲ. ವಿದೇಶದಲ್ಲಿ, ದೇಶದ ಪ್ರಧಾನಿ ತೆಗಳೋದು ಅವರ ಚೈಲ್ಡಿಶ್ ಬುದ್ದಿ ತೋರಿಸುತ್ತೆ ಎಂದು ಕಿಡಿಕಾರಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ