ಹೆಸ್ಕಾಂ ಶಾಖಾಧಿಕಾರಿ ಮೇಲೆ ಹಲ್ಲೆ !

Kannada News

13-09-2017

ಬೆಳಗಾವಿ: ಬೆಳಗಾವಿ ಗ್ರಾಮೀಣ ಹೆಸ್ಕಾಂ ಕಚೇರಿಯ ಶಾಖಾಧಿಕಾರಿ ಮೇಲೆ ಹಲ್ಲೆ ನಡೆದಿದ್ದು, ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿ ಸುಭಾಸ ಹಳ್ಳೋಳಿ(39)ಯನ್ನ ಹೊರ ಕರೆದು ಮನಬಂದಂತೆ ಹಲ್ಲೆ ಮಾಡಿದ್ದಾರೆ. ನೆಹರು ನಗರದ ಹೆಸ್ಕಾಂ ತಾಂತ್ರಿಕ ಶಾಖೆಯ ಕಚೇರಿ ಮುಂಭಾಗದಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಗಾಯಾಳು ಅಧಿಕಾರಿಯನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಹಿಂದಿನ ಹೆಸ್ಕಾಂ ಪ್ರಭಾರಿ ಶಾಖಾಧಿಕಾರಿ ವಿಜಯ್ ಮೀಸಿ ಕಡೆಯವರಿಂದ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದು ಬಂದಿದೆ. ಕಚೇರಿ‌ ಪಿಠೋಪಕರಣ ಚಾರ್ಜ್ ಕೊಡುವ ವಿಚಾರದಲ್ಲಿ‌ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಇದರಿಂದ ನಿನ್ನೆ ಸಂಜೆ ವಿಜಯ್ ಮೀಸಿ ಸಹೋದರ ಶಂಕರ ಹಾಗೂ ಮೂವರು ಹಲ್ಲೆ ನಡೆಸಿದ್ದಾರೆ. ನಮ್ಮನ್ನ ಎದುರು ಹಾಕಿಕೊಂಡು‌ ಹೇಗೆ ಬದುಕ್ತೀಯಾ? ಎಂದು ದಮ್ಕಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ತಡರಾತ್ರಿ ಮಾಳಮಾರುತಿ ಠಾಣೆಯಲ್ಲಿ ಹಿಂದಿನ ಹೆಸ್ಕಾಂ ಶಾಖಾಧಿಕಾರಿ‌ ವಿಜಯ್ ಮೀಸಿ, ಸಹೋದರ ಶಂಕರ ಮೀಸಿ ಹಾಗೂ ಮೂವರ ವಿರುದ್ಧ ಕೇಸು ದಾಖಲಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ