ವೀರಶೈವ,ಲಿಂಗಾಯತ: ಪದಗಳ ಅರ್ಥ ಒಂದೇ !

Kannada News

12-09-2017

ತುಮಕೂರು: ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಅವರ ಹೇಳಿಕೆಗೆ ಸಿದ್ಧಗಂಗಾ ಮಠಾಧ್ಯಕ್ಷರಾದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಗಳು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ವೀರಶೈವ ಹಾಗೂ ಲಿಂಗಾಯತ ಎರಡೂ ಪದಗಳ ಅರ್ಥ ಒಂದೇ. ಸುಮ್ಮನೆ ಶ್ರೀಮಠವನ್ನು ಗೊಂದಲಕ್ಕೆ ಎಳೆಯಬೇಡಿ ಎಂದು ಹೇಳಿದ್ದಾರೆ.  ಮೊನ್ನೆ ಮಠದಲ್ಲಿ ತಮ್ಮನ್ನು ಸಚಿವ ಎಂ.ಬಿ.ಪಾಟೀಲ್ ಅವರು ಭೇಟಿ ಮಾಡಿ ವಿಷಯ ಪ್ರಸ್ತಾಪಿಸಿದಾಗ ಹಳ್ಳಿಗಾಡಿನಲ್ಲಿ ಲಿಂಗಾಯತ ಎಂಬ ಪದ ಬಳಕೆಯಲ್ಲಿದೆ. ಆದರೆ, ನಗರ ಪ್ರದೇಶದಲ್ಲೂ ಓದಿಕೊಂಡಿರುವವರು ವೀರಶೈವರು ಎಂದು ಹೇಳಿಕೊಳ್ಳುತ್ತಾರೆ. ಸೈದ್ಧಾಂತಿಕ ಸಿದ್ಧಾಂತಗಳ ನಡುವೆ ಎಲ್ಲರೂ ಒಂದಾಗಿ ಹೋಗಬೇಕೆಂಬ ಅಭಿಪ್ರಾಯದಲ್ಲಿ ನಾವು ಹೌದು ಎಂದಿದ್ದೆವು. ಆದರೆ, ಪ್ರತ್ಯೇಕ ಧರ್ಮದ ಬಗ್ಗೆ ನಾವು ಮಾತನ್ನೇ ಆಡಿಲ್ಲ ಎಂದು ತಿಳಿಸಿದ್ದಾರೆ.

ಸಚಿವರು ಅನಗತ್ಯವಾಗಿ ಮಠವನ್ನು ಮತ್ತು ನಮ್ಮನ್ನು ರಾಜಕೀಯವಾಗಿ ಬಳಸಿಕೊಂಡಿರುವುದು ತೀವ್ರ ಅಸಮಾಧಾನ ತಂದಿದೆ. ಅವರ ಹೇಳಿಕೆ ಜನರಲ್ಲಿ ತಪ್ಪು ಭಾವನೆ ಮೂಡಿಸುತ್ತದೆ. ಈ ಬಗ್ಗೆ ವಿವಾದ ಬೇಡ. ಅನಗತ್ಯ ಹೇಳಿಕೆ ನೀಡಿ ಮಠವನ್ನು ಗೊಂದಲಕ್ಕೆ ಸಿಲುಕಿಸುವುದು ಬೇಡ ಎಂದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ