ಪಿಸ್ತೂಲ್‍ ನ ಜಾಡು ಹಿಡಿದು ಶೋಧ !

Kannada News

12-09-2017

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ ಹಂತಕರ ಪತ್ತೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ವಿಶೇಷ ತನಿಖಾ ದಳ(ಎಸ್‍ಐಟಿ)ದ ಅಧಿಕಾರಿಗಳುತಂಡ ಹತ್ಯೆಗೆ  ಬಳಸಿದ ಪಿಸ್ತೂಲ್‍ ನ ಜಾಡು ಹಿಡಿದು ದುಷ್ಕರ್ಮಿಗಳ ಪತ್ತೆಗೆ ತೀವ್ರ ಶೋಧ ನಡೆಸಿದೆ.

ವಿಚಾರವಾಧಿ ಕಲ್ಬುರ್ಗಿ ಹತ್ಯೆಗೆ ಬಳಸಿದೆ ಮಾದರಿಯ ಪಿಸ್ತೂಲ್ ಅನ್ನೇ  ಗೌರಿ ಹತ್ಯೆಗೂ ಬಳಸಲಾಗಿದೆ ಅಲ್ಲದೇ  ಕುಖ್ಯಾತ ಭೀಮಾ ತೀರದ ಹಂತಕರು ಬಳಸುವ ಇದೇ ಮಾದರಿಯ ಪಿಸ್ತೂಲ್ ಉಪಯೋಗಿಸಿರುವ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ ಎಂದು ಎಸ್‍ಐಟಿ ಮೂಲಗಳು ತಿಳಿಸಿವೆ. ಗೌರಿ ಹತ್ಯೆಗೆ ಬಳಸಿರುವ ನಾಡ ಪಿಸ್ತೂಲ್ (7.65 ಎಂಎಂ) ಪೂರೈಕೆ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಇಳಿದಿರುವ ಅಧಿಕಾರಿಗಳು, ಪಿಸ್ತೂಲ್ ಮಾರಾಟ ಜಾಲವು ಅತಿ ಹೆಚ್ಚು ಹರಡಿರುವ ಕರ್ನಾಟಕ, ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಜೊತೆಗೆ ಅಕ್ರಮ ಶಸ್ತ್ರಾಸ್ತ್ರ ಮಾರಾಟ ಪ್ರಕರಣದಲ್ಲಿ ಬಂಧಿತರಾಗಿರುವ ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ ಆರೋಪಿಗಳನ್ನು ವಿಚಾರಣೆಗೊಳಪಡಿಸಿ ಮತ್ತೊಂದು ತಂಡವು ವಿವರಗಳನ್ನು ಕಲೆಹಾಕುತ್ತಿದೆ.

ಮಂಗಳೂರು, ಬೆಂಗಳೂರು ಕೇಂದ್ರ ಕಾರಾಗೃಹ ದಲ್ಲಿರುವ  ದೇಶದ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂನ `ಡಿ' ಕಂಪನಿಯ ಯೂಸೆಫ್ ಬಚ್ಚಾ ಖಾನ್, ರಶೀದ್ ಮಲಬಾರಿ ಸಹಚರರು ಹಾಗೂ ವಿಜಯಪುರ ಕೇಂದ್ರ ಕಾರಾಗೃಹದಲ್ಲಿರುವ ಮೂವರು ವಿಚಾರಣಾಧೀನ ಕೈದಿಗಳನ್ನು ಅಧಿಕಾರಿಗಳು ಪ್ರಶ್ನಿಸಿ ಪಿಸ್ತೂಲ್ ಮಾರಾಟ ದಂಧೆ ಬಗ್ಗೆ ವಿವರ ಕಲೆ ಹಾಕಿದ್ದಾರೆ ಎಂದು ಮೂಲಗಳು ಹೇಳಿವೆ.

ಇನ್ನೊಂದು ತಂಡವು ಮೈಸೂರು, ಧಾರವಾಡ, ಬಳ್ಳಾರಿ ಹಾಗೂ ಕಲುಟರ್ಗಿ ಸೆಂಟ್ರಲ್ ಜೈಲುಗಳಿಗೆ ತೆರಳಿ ಅಲ್ಲಿರುವ ಶಸ್ತ್ರಾಸ್ತ್ರ ಸರಬರಾಜುದಾರರನ್ನು ವಿಚಾರಿಸಿದ್ದು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಿ ಹಂತಕರ ಪತ್ತಗೆ ಕಾರ್ಯಾಚರಣೆ ನಡೆಸಿವೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ