ಪ್ರಧಾನಿ ಯಾಕೆ ಸುಮ್ಮನಿದ್ದಾರೆ..?  

Kannada News

12-09-2017

ಬೆಂಗಳೂರು: ಪೆನ್ನನ್ನೇ ಖಡ್ಗವನ್ನಾಗಿ ಮಾಡಿಕೊಂಡಿದ್ದ ಗೌರಿ ಲಂಕೇಶ್ ಅವರಿಂದ ಹೆದರಿದವರು ಗೌರಿ ಲಂಕೇಶ್ ಅವರ ಹತ್ಯೆ ಮಾಡಿದ್ದಾರೆ, ಇದು ಹಿಂದೂತ್ವವಾದಿ ಮೂಲಭೂತವಾದಿಗಳು ಮಾಡಿದ ಹತ್ಯೆ ಎಂದು ನರ್ಮದಾ ಬಚಾವೊ ಆಂದೋಲನದ ನಾಯಕಿ, ಖ್ಯಾತ ಮಾನವ ಹಕ್ಕು ಹೋರಾಟಗಾರರಾದ ನೇರ ಆಪಾದನೆ ಮಾಡಿದ್ದಾರೆ. ಈ ದೇಶದಲ್ಲಿರುವ ಸಂವಾದ ಮತ್ತು ವೈಚಾರಿಕತೆಯ ಪರಂಪರೆಯನ್ನು ಗೌರಿ ಮುಂದುವರಿಸಿದರು.

ಅವರ ಪ್ರಶ್ನೆಗಳಲ್ಲಿ ಇರುವ ಆಳ ಈ ದೇಶವನ್ನು ನಡೆಸುವವರ ಉತ್ತರಗಳಲ್ಲಿ ಇರುವುದಿಲ್ಲ. ಸಾಮಾಜಿಕ ಕಾಳಜಿಯ ಎಲ್ಲ ಹೋರಾಟಗಳಲ್ಲೂ ಗೌರಿ ಲಂಕೇಶ್ ಮುಂದಿದ್ದರು. ದಲಿತರು, ಆದಿವಾಸಿಗಳ ಪರವಾಗಿ ಹೋರಡಿದರು. ಟಿಪ್ಪೂ ಸುಲ್ತಾನ್ ಜಯಂತಿಯ ವಿರುದ್ಧ, ಇದ್ದವರ ವಿರುದ್ಧವೂ ಹೋರಾಡಿದರು. ಗೌರಿ ಲಂಕೇಶ್ ಕೊಲೆ ಮಾಡಿದವರು ಯಾರು ಎಂದು ಎಲ್ಲರಿಗೂ ತಿಳಿದಿರುವ ವಿಚಾರ ಎಂದು ಹೇಳಿದರು.

ಅಖ್ಲಾಕ್ ಮತ್ತು ಜುನೈದ್ ಮುಂತಾದವರನ್ನು ಕಗ್ಗೊಲೆ ಮಾಡಿದ ಬಳಿಕ ಹಿಂದೂತ್ವವಾದಿಗಳಿಗೆ ಕೊಲೆ ಮಾಡುವುದು ಬಹಳ ಸುಲಭವಾಗಿದೆ. ಗೌರಿ ಲಂಕೇಶ್ ಹತ್ಯೆ ಮಾಡಿದವರನ್ನು ಸೆರೆ ಹಿಡಿಯಲು ಬೇರೆಲ್ಲೂ ಹೋಗಬೇಕಿಲ್ಲ. ಗೋವಾದಲ್ಲಿರುವ ಸನಾತನ್ ಭಾರತದ ವೆಬ್‌ಸೈಟ್ ನೋಡಿದರೆ ಸಾಕು, ಎಲ್ಲವೂ ಅರ್ಥವಾಗುತ್ತದೆ ಎಂದು ಮೇಧಾಪಾಟ್ಕರ್ ಹೇಳಿದರು. ಗೌರಿ ಲಂಕೇಶ್ ಅವರ ಕೊಲೆಯಲ್ಲಿ ಆರೆಸ್ಸೆಸ್ ಕೈವಾಡವಿದೆ ಎಂದು ಹೇಳಿದ್ದಕ್ಕೆ ರಾಮಚಂದ್ರಗುಹಾ ಅವರಿಗೆ ನೊಟೀಸ್ ನೀಡಲಾಗಿದೆಯಂತೆ. ಅಂತಹ ನೊಟೀಸು ನಮಗೆಲ್ಲರಿಗೂ ಕೊಡಲಿ ಎಂದು ಮೇಧಾ ಸವಾಲು ಹಾಕಿದ್ದಾರೆ.

ಗೌರಿಯವರದ್ದು ಸೀಮಿತ ಪರಿವಾರವಲ್ಲ. ಅವರ ಪರಿವಾರದಲ್ಲಿ ಅವರ ಪತ್ರಿಕೆಯ ಓದುಗರು, ಅವರ ಅಭಿಮಾನಿಗಳು ಮತ್ತು ಅವರ ಜೊತೆಗಿರುವ ಹೋರಾಟದ ಎಲ್ಲ ಕಾರ್ಯಕರ್ತರು ಅವರ ಕುಟುಂಬ. ನಾವು ಗೌರಿ ಅವರು ಮಾತನಾಡುತ್ತಿದ್ದ ವಿಚಾರಗಳ ಬಗ್ಗೆ ಮಾತನಾಡುವುದನ್ನು ನಾವು ಮುಂದುವರಿಸಲಿದ್ದೇವೆ ಎಂದು ಹೇಳಿದ ಮೇಧಾ ಪಾಟ್ಕರ್, ಪ್ರಧಾನ ಮಂತ್ರಿ ಯಾಕೆ ಸುಮ್ಮನಿದ್ದಾರೆ? ಮೊದಿ ಜಿ ಎಲ್ಲಿದ್ದಾರೆ? ಮೋದಿ ಎಲ್ಲ ಬಹುತ್ವವನ್ನು ಮುಗಿಸುವ ಯತ್ನದಲ್ಲಿದ್ದಾರೆ ಎಂದು ಆಪಾದನೆ ಮಾಡಿದರು.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ