ಜೆಡಿಎಸ್: ಅಧಿಕಾರಕ್ಕೆ ತರಲು ಪಣ ತೊಟ್ಟಿರುವೆ !

Kannada News

12-09-2017

ಬೆಂಗಳೂರು: ಜೆಡಿಎಸ್ ನ ರಾಷ್ಟ್ರಾಧ್ಯಕ್ಷ್ಯ ಹೆಚ್‌.ಡಿ.ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪದಾಧಿಕಾರಿಗಳ ಸಭೆ ನಡೆಸಿದ್ದಾರೆ. ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಸಭೆ ನಡೆಸಿದ್ದು, ಇತ್ತೀಚೆಗಷ್ಟೇ ನೂತನ‌ ಪದಾಧಿಕಾರಿಗಳ ಪಟ್ಟಿ ಬಿಡುಗಡೆಯಾಗಿತ್ತು. ನೂತನ ಪದಾಧಿಕಾರಿಗಳ ಜೊತೆ ಜೆಡಿಎಸ್ ವರಿಷ್ಠರ ಮೊದಲ ಸಭೆ ಇದಾಗಿದ್ದು, ಈ ವೇಳೆ ಮಾತನಾಡಿದ ಹೆಚ್.ಡಿ.ದೇವೇಗೌಡರು, ಬೂತ್ ಮಟ್ಟದ ಸಂಘಟನೆಗೆ ಜಿಲ್ಲೆಗಳಿಗೆ ವೀಕ್ಷಕರ ನೇಮಕ ಮಾಡಲಾಗಿದೆ, ಕೆಲವೆಡೆ ಬೂತ್ ಕಮಿಟಿ ರಚನೆಯಾಗಿದೆ, ಕೆಲವೆಡೆ ಆಗಿಲ್ಲ, ಹಾಗಾಗಿ‌ ಪಕ್ಷದ ಹಿರಿಯ ಮುಖಂಡರ ನೇತೃತ್ವದಲ್ಲಿ 5 ತಂಡಗಳನ್ನು ಮಾಡಲಾಗಿದೆ ಎಂದರು. ತಂಡದಿಂದ ಜಿಲ್ಲೆಯ ಪ್ರಗತಿಯ ಅವಲೋಕನ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಇಂದು ಪದಾಧಿಕಾರಿಗಳ ಸಭೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಐಕ್ಯತೆಯಿಂದ ಪಕ್ಷ ಸಂಘಟನೆ ಮಾಡಬೇಕು, ಇದು ನಮ್ಮ ಮುಂದಿರುವ ಪ್ರಶ್ನೆ. ಬೆಳಗಾಂ, ಚಿಕ್ಕೋಡಿ, ಬಾಗಲಕೋಟೆ, ಹಾವೇರಿ, ಧಾರವಾಡ, ಚಿತ್ರದುರ್ಗ, ದಾವಣಗೆರೆ ನಂತರ ತುಮಕೂರು, ಹಾಸನ ಜಿಲ್ಲೆಗಳಲ್ಲಿ ಸಭೆ ನಡೆಸಿದ್ದೇನೆ. 7 ತಂಡವಾಗಿ ಹಿರಿಯ ಮುಖಂಡರಿಂದ ಜಿಲ್ಲಾ ಭೇಟಿ ಮಾಡಿದ್ದೇನೆ ಮತ್ತು 15 ದಿವಸಗಳಿಗೊಮ್ಮೆ ಭೇಟಿ ನೀಡಲಾಗುವುದು ಎಂದರು.

ಜಾತಿವಾರು ಪಕ್ಷ ಸಂಘಟನೆ ಮಾಡಬೇಕು, ಸಹಕಾರ ಮಾಡಿದವರನ್ನು ಇಟ್ಟುಕೊಳ್ಳಿ, ದೇವೇಗೌಡರದ್ದು ಒಂದು ರೀತಿ, ಕುಮಾರಸ್ವಾಮಿ ರದ್ದು ಇನ್ನೊಂದು ರೀತಿ ಅನ್ನೋದು ಬೇಡ ಎಂದು ತಿಳಿಸಿದರು.

ಇದೇ ವೇಳೆ ಪಕ್ಷ ಸಂಘಟನೆಗೆ ಆದ್ಯತೆ ನೀಡುವಂತೆ ದೇವೇಗೌಡರು ಕರೆ ನೀಡಿದರು.  ಪ್ರತಿ ತಾಲೂಕಿನಲ್ಲು ಜೆಡಿಎಸ್ ಕಚೇರಿ ತೆರೆಯಲು ಸೂಚಿಸಿದ್ದು, ಕಚೇರಿ ಖರ್ಚನ್ನು ಭರಿಸೋದಾಗಿ ಭರವಸೆ ನೀಡಿದರು. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರಲೇ ಬೇಕು ಎಂದು ಪಣ ತೊಟ್ಟಿರುವೆ, ದಯಮಾಡಿ ಎಲ್ಲಾ ಕಾರ್ಯಕರ್ತರು 8 ತಿಂಗಳು ಹಗಲು ರಾತ್ರಿ ಪಕ್ಷ ಕಟ್ಟಿ ಎಂದರು. ಪಕ್ಷದಲ್ಲಿ ಸಕ್ರಿಯರಾಗದವರನ್ನು ಕಿತ್ತು ಹಾಕಲಾಗುವುದು, ಹಳೆ ದಿನಗಳು ಇಂದಿಲ್ಲ, ಇವತ್ತಿನ‌ ನಾಯಕತ್ವ ಕಳಪೆ ಏನಿಲ್ಲ, ಪಕ್ಷದಲ್ಲಿ ಈಗ ಕಮಿಟ್ಮೆಂಟ್ನಿಂದ ಉಳಿದಿದ್ದಾರೆ, ಯಾವ ಲಾಭನಷ್ಟಕ್ಕೂ ಉಳಿದಿಲ್ಲ. ಅಷ್ಟೇ ಅಲ್ಲದೇ ಈಗಿರುವ ನಾಯಕರನ್ನೇ ಮತ್ತೊಮ್ಮೆ ನಾಯಕರನ್ನಾಗಿ ಮಾಡಲಾಗುವುದು ಎಂದು ಹಾಲಿ ಶಾಸಕರಿಗೆ ಟಿಕೇಟ್ ಭರವಸೆ ನೀಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ