ಮಾವ ಶಾಸಕ: ಆದ್ರೆ ಸೋದರಳಿಯ ಮಹಾಕಳ್ಳ !

Kannada News

12-09-2017

ಬಳ್ಳಾರಿ: ಮಾವ ಶಾಸಕ, ಆದ್ರೆ ಶಾಸಕರ ಸೋದರಳಿಯ ಮಾತ್ರ ಮಹಾಕಳ್ಳ, ಶಾಸಕರ ಹೆಸರು ಬಳಸಿಕೊಂಡು ಜಿಂದಾಲ್ ಕಾರ್ಖಾನೆಯಲ್ಲಿ ಟ್ರಾನ್ಸ್ ಪೋರ್ಟ್ ಏಜೆನ್ಸಿ ಮಾಡುತ್ತಿದ್ದ, ಗುಂಪೊಂದು ಸ್ಲಾಗ್ ಹೆಸರಿನಲ್ಲಿ ಜಿಂದಾಲ್ ಕಾರ್ಖಾನೆಯಿಂದಲೇ ಮಿದು ಕಬ್ಬಿಣವನ್ನು ( ಸ್ಪಾಂಜ್ ಐರನ್ ಓರ್ ) ಕಳ್ಳತನ ಮಾಡುತ್ತಿದ್ದ ಜಾಲವನ್ನು ಪೊಲೀಸರು ಬೇಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

ಜಿಲ್ಲೆಯ ತೋರಣಗಲ್ಲಿನ ಜಿಂದಾಲ್ ಕಾರ್ಖಾನೆಯಲ್ಲಿ ಕಳೆದ ಹಲವಾರು ದಿನಗಳಿಂದ ಸ್ಲಾಗ್ ಹೆಸರಿನಲ್ಲಿ ಸ್ಪಾಂಜ್ ಐರನ್ ಓರ್ ಅನ್ನು ಬೇರೊಂದು ಕಾರ್ಖಾನೆಗೆ ಮಾರಾಟ ಮಾಡುತ್ತಿದ್ದರು.

ಜಿಂದಾಲ್ ಕಾರ್ಖಾನೆಯ ನಾಲ್ವರು ಸಿಬ್ಬಂದಿಗಳು ಇದರಲ್ಲಿ  ಭಾಗಿಯಾಗಿದ್ದು, ಜಿಂದಾಲ್ ಉದ್ಯೋಗಿಗಳ ಜೊತೆ ಸಿಂಧನೂರ ಶಾಸಕ ಹಂಪನಗೌಡ ಬಾದರ್ಲಿಯವರ ಸೋದರಳಿಯ ಯರಿಸ್ವಾಮಿ ಹಾಗೂ ಇನ್ನಿತರ ಹತ್ತು ಜನರ ವಿರುದ್ದ ಜಿಂದಾಲ್ ಕಾರ್ಖಾನೆ ಆಡಳಿತ ಮಂಡಳಿ ತೋರಣಗಲ್ ಪೊಲೀಸ ಠಾಣೆಯಲ್ಲಿ ದೂರು ದಾಖಲು ಮಾಡಿದೆ. ಪ್ರಕರಣದ ತನಿಖೆ ನಡೆಸಿದ ತೋರಗಣಲ್ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಜಿಂದಾಲ್ ಸಿಬ್ಬಂದಿ ಸೇರಿದಂತೆ 7 ಜನರನ್ನು ಬಂಧಿಸಿದ್ದು ಇನ್ನೂ ಮೂವರಿಗೆ ಜಾಲ ಬೀಸಿದ್ದಾರೆ. ಪ್ರಕರಣಕ್ಕೆ ಸಂಬಂಧ 2ಲಾರಿಗಳನ್ನು ಜಪ್ತಿ ಮಾಡಿ, ಪ್ರಕರಣದ ತನಿಖೆ ಮುಂದುವರೆಸಿದ್ದು, ಇದೊಂದು ಬಹುದೊಡ್ಡ ಹಗರಣವಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ