ಪೊಲೀಸರಂತೆ ನಟಿಸಿ: ಚಿನ್ನದ ಸರ ಕಳ್ಳತನ !

Kannada News

12-09-2017

ಮೈಸೂರು: ಪೊಲೀಸರ ಸೋಗಿನಲ್ಲಿ ಬಂದ ಖತರ್ನಾಕ್ ಕಳ್ಳರು ವೃದ್ದ ಮಹಿಳೆಯ ಸರ ಕಳ್ಳತನ ಮಾಡಿದ್ದಾರೆ. ಘಟನೆಯು ಮೈಸೂರಿನ ಸರಸ್ವತಿಪುರಂ ನಲ್ಲಿ ನಡೆದಿದೆ. ಸರಸ್ವತಿಪುರಂ ಪೊಲೀಸ್ ಠಾಣೆಗೆ ಕೂಗಳತೆ ದೂರದಲ್ಲಿರುವ ಕೃಷ್ಣಧಾಮದ ಬಳಿಯ, 14ನೇ ಮುಖ್ಯರಸ್ತೆ ನಿವಾಸಿ ನಾಗರತ್ನಮ್ಮ (65) ಎಂಬ ಮಹಿಳೆ ಚಿನ್ನದ ಸರ ಕಳೆದುಕೊಂಡವರಾಗಿದ್ದಾರೆ. ಕೃಷ್ಣಧಾಮಕ್ಕೆ ಭೇಟಿ ನೀಡಲು ಬಂದ ವೇಳೆ ಘಟನೆ ನಡೆದಿದೆ. ಕೃಷ್ಣಧಾಮದ ಬಳಿ ನಿಂತಿದ್ದ ಅಪರಿಚಿತ ವ್ಯಕ್ತಿಯೋರ್ವ ತಾನು ಪೊಲೀಸ್, ಒಳಗೆ ತುಂಬಾ ಜನಜಂಗುಳಿಯಿದೆ, ಹಾಗಾಗಿ ನಿಮ್ಮ ಬಂಗಾರದ ಒಡೆವೆಗಳನ್ನು ಇಲ್ಲೇ ಕೊಟ್ಟು ಹೋಗಿ ಎಂದು ಹೇಳಿದ್ದಾನೆ. ಈ ವೇಳೆ ದುಷ್ಕರ್ಮಿಯ ಜೊತೆಯಿದ್ದ ಮತ್ತೋರ್ವ ಖದೀಮ ತನ್ನ ಬಳಿಯಿದ್ದ ಸರವನ್ನು ಬಿಚ್ಚಿಕೊಡುವ ನಾಟಕವಾಡಿದ್ದಾನೆ. ಇದನ್ನು ನೋಡಿ ನಂಬಿದ ನಾಗರತ್ನಮ್ಮ ಕೂಡ ತಮ್ಮ ಬಳಿಯಿದ್ದ ಚಿನ್ನದ ಸರವನ್ನು ಕೊಡಲು ಮುಂದಾಗುತ್ತಿದ್ದಂತೆ, ಕಸಿದುಕೊಂಡ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಆರೋಪಿಗಳನ್ನು ಸೆರೆ ಹಿಡಿಯಲು, ಪ್ರಕರಣ ಕುರಿತು ಮಾಹಿತಿ ಕಲೆಹಾಕುತ್ತಿದ್ದು. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ