ಚಿನ್ನದ ಸರ ದರೋಡೆ: ಖದೀಮರ ಬಂಧನ !

Kannada News

12-09-2017

ಉತ್ತರ ಕನ್ನಡ: ಚಿನ್ನದ ಸರ ಹಾಗೂ ನಗದನ್ನು ಕದ್ದೊಯ್ದಿದ್ದ ಇಬ್ಬರು ಖದೀಮರನ್ನು ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯ ನಡೆದ ಎರಡು ದಿನಗಳಲ್ಲೇ ಕಳ್ಳರನ್ನು ಪೊಲೀಸರು ಸರೆಹಿಡಿದಿದ್ದಾರೆ. ಹಂಚಿನಕೇರಿಯ ಆಸ್ಕರ್ ಅಲಿ ಹಾಗೂ ಕಸ್ತೂರಬಾನಗರದ ಗಣೇಶ ಬೊಂಗಾಳೆ ಬಂಧಿತ ಆರೋಪಿಗಳು. ಬಂಧಿತರಿಂದ 40 ಗ್ರಾಂ. ತೂಕದ ಅಂದಾಜು 1.16 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ ವಶಕ್ಕೆ ಪಡೆಯಲಾಗಿದೆ. ಜೊತೆಗೆ 71 ಸಾವಿರ ನಗದನ್ನು ಈ ವೇಳೆ ವಶಕ್ಕೆ ಪಡೆಯಲಾಗಿದೆ. ಮತ್ತು ಆರೋಪಿಗಳನ್ನು ಹೆಚ್ಚನ ತನಿಖೆಗೆ ಒಳಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ