ಎಟಿಎಂ ದರೋಡೆಗೆ ವಿಫಲ ಯತ್ನ !

Kannada News

12-09-2017

ಉಡುಪಿ: ಎಟಿಎಂ ದರೋಡೆಗೆ ವಿಫಲ ಯತ್ನ ನಡೆಸಿರುವ ಘಟನೆಯು ಉಡುಪಿಯಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ  ಬ್ರಹ್ಮಾವರ ಸಮೀಪದ ವಾರಂಬಳ್ಳಿಯಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಕಾರ್ಪೋರೇಷನ್ ಬ್ಯಾಂಕಿನ ಎಟಿಎಂ ನಲ್ಲಿ, ಎಟಿಎಂ ಬಾಕ್ಸಿನ ಮುಂಭಾಗದ ಪ್ಲೇಟ್ ಕಿತ್ತ ಕಳ್ಳರು, ಹಣ ತುಂಬಿದ್ದ ಕೌಂಟರ್ ಓಪನ್ ಆಗದ ಹಿನ್ನೆಲೆ, ಎಟಿಎಂ ಅನ್ನು ಹಾಗೇ ಬಿಟ್ಟು ತೆರಳಿದ್ದಾರೆ. ಮೊದಲು ಸಿಸಿ ಕ್ಯಾಮೆರಾ ಕಡಿತಗೊಳಿಸಿದ್ದ ದರೋಡೆಕೋರರು ವಿಫಲ ಯತ್ನ ನಡೆಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಬಂದು, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಕಳ್ಳರಿಗಾಗಿ ಶೋಧ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಉಡುಪಿ ಎಟಿಎಂ ದರೋಡೆಗೆ ವಿಫಲ ಯತ್ನ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ