ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳದ ಬಸ್ ಗಳು !

Kannada News

12-09-2017 269

ಬಳ್ಳಾರಿ: ಬಳ್ಳಾರಿಯಲ್ಲಿ ನಡೆಯುತ್ತಿರುವ ಸಾಧನ ಸಮಾವೇಷಕ್ಕೆಂದು ಸಾರಿಗೆ ಸಂಪರ್ಕವನ್ನು ಏರ್ಪಡಿಸಲಾಗಿತ್ತು. ಈ ಬಸ್ ಗಳು,  ಬಸ್ ಪಾಸ್ ಹೊಂದಿರುವ ವಿದ್ಯಾರ್ಥಿಗಳಿಗೆ ಬಳ್ಳಾರಿಯ ತಮ್ಮ ಶಾಲಾ ಕಾಲೇಜುಗಳಿಗೆ ಹೋಗಲು ಹತ್ತಿಸಿಕೊಂಡು ಹೋಗದಿದ್ದು, ಕಾರಣ ಕೇಳಿದರೆ ಈ ಬಸ್ ಗಳು ಸಾಧನ ಸಮಾವೇಷಕ್ಕೆಂದು ಏರ್ಪಡಿಸಲಾಗಿರುವ ಬಸ್ ಗಳು ವಿದ್ಯಾರ್ಥಿಗಳಿಗೆ ಅವಕಾಶ ಇದೆಯೆಂದು ನಮಗೆ ಯಾವುದೇ ಆದೇಶ ನೀಡಿಲ್ಲವೆಂದು ಸಬೂಬು ಹೇಳಿದರು. ಇದರಿಂದ ವಿದ್ಯಾರ್ಥಿಗಳು ಆಕ್ರೋಶದಿಂದ ಬಸ್ ಗಳನ್ನು ತಡೆದರು. ನಂತರ ಸ್ಥಳೀಯ ರಾಂಪುರ ಠಾಣೆಯ ಪೋಲಿಸರು ಆಗಮಿಸಿ ಮಾತುಕತೆ ನಡೆಸಿದರೂ ಯಶಸ್ವಿಯಾಗಲಿಲ್ಲ.

ನಂತರ ಬಳ್ಳಾರಿಯ ಸರಕಾರಿ ಬಸ್ ಡಿಪೋಗೆ ಪೋನ್ ಮಾಡಿದರೆ ಅವರು ಸರಿಯಾಗಿ ಪ್ರತಿಕ್ರಿಯಿಸದಿರುವುದರಿಂದ ವಿದ್ಯಾರ್ಥಿಗಳು ಬಸ್ ಗಳನ್ನು ಬಿಡಲಿಲ್ಲ. ನಂತರ ಕೆಲವು ಕಾಲೇಜುಗಳಲ್ಲಿ ಇಂಟರ್ನಲ್ ಎಕ್ಸಾಮ್ ಇರುವುದು ತಿಳಿದ ನಂತರ ಪ್ರತಿ ಬಸ್ ಗೆ ಐದು ವಿದ್ಯಾರ್ಥಿಗಳನ್ನು ಕಳುಹಿಸಲಾಯಿತು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ